ಬೆಂಗಳೂರು,ಏಪ್ರಿಲ್,14,2026 (www.justkannada.in): ನಾವು ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿ ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ದವು. ಅಂದು ಹೇಳಿದಂತೆ ಒಳಮೀಸಲಾತಿ ಪ್ರಮಾಣ 6:6:5 ವಿಂಗಡಿಸಲಾಗಿದೆ. ಆದರೆ ಒಳಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ಇದೆ. ಈಗ ಮೀಸಲಾತಿ ಪ್ರಮಾಣ ಶೇ 15ರಷ್ಟರಬೇಕೆಂದು ಚರ್ಚೆ. ಬಿಜೆಪಿಯವರು ಏನೇನೋ ಹೇಳುತ್ತಾರೆ ಅದನ್ನೆಲ್ಲ ನಂಬಬೇಡಿ ಒಳಮೀಸಲಾತಿ ತಂದು ಸಮಾನತೆಯಿಂದ ನೋಡಬೇಕು. ಅಂಬೇಡ್ಕರ್ ಮೀಸಲಾತಿ ಅವಕಾಶ ನೀಡಿದ್ದು ಕಿತ್ತಾಡೋಕ್ಕಲ್ಲ ಅರ್ಧ ಪರ್ಸೆಂಟ್ ಗೋಸ್ಕರ ಕಿತ್ತಾಡುವುದು ಬೇಡ. ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ ಎಂದರು.
ಒಳಮೀಸಲಾತಿ ಜಾರಿ ವಿಚಾರದಲ್ಲಿ ಬದ್ದತೆ ಇದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ ಒಳಮೀಸಲಾತಿ ವಿಚಾರವಾಗಿ ಮಾತನಾಡುತ್ತಿದ್ದಾರೆ . ಕಾಂಗ್ರೆಸ್ ಮೀಸಲಾತಿ ಪರವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Internal reservation, implemented, DCM, DK Shivakumar







