ಕೆಪಿಸಿಸಿ ಸಭೆಯಲ್ಲಿ ಓಪನ್ ಆಗೇ ಮುಸ್ಲೀಮರಿಗೆ ಟಿಕೆಟ್ ಕೇಳಿದ್ದೆ- ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು,ಏಪ್ರಿಲ್,14,2026 (www.justkannada.in): ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ನಾನು ಯಾವುದೇ ಮುಚ್ಚುಮರೆ ಮಾಡಿಲ್ಲ. ಓಪನ್ ಆಗಿ ಕೆಪಿಸಿಸಿ ಸಭೆಯಲ್ಲಿ  ಮುಸ್ಲೀಮರಿಗೆ ಟಿಕೆಟ್ ಕೇಳಿದ್ದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಇಂದು  ಮಾಧ್ಯಮಗಳ ಜೊತೆ ಮಾತಾನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ನಾನು ಅಬ್ದುಲ್ ಜಬ್ಬಾರ್ ಹೆಸರು ಹೇಳಿಲ್ಲ.  7 ಮಂದಿ ಮುಸ್ಲೀಮರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ಕೊಡಿ ಎಂದಿದ್ದೆ. ಡಿಸಿಎಂ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಮುಂದೆ ಮುಸ್ಲೀಮರಿಗೆ ಟಿಕೆಟ್ ಕೇಳಿದ್ದೇನೆ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ.  ಓಪನ್ ಆಗಿ ನಾನು ಈ ಮಾತು ಹೇಳಿದ್ದೇನೆ ಎಂದರು.

ನಾನು ಏಪ್ರಿಲ್  7ರವರೆಗೂ ಕೇರಳದಲ್ಲಿ ಪ್ರಚಾರ ಮಾಡಬೇಕಿತ್ತು ಆದರೆ ಸಿಎಂ ಸಿದ್ದರಾಮಯ್ಯ ಏ.5 ರಂದು ದಾವಣಗೆರೆ ಬರುತ್ತಾರೆ.  ಹೀಗಾಗಿ ಕೆಸಿ  ವೇಣುಗೋಪಾಲ್ ಅನುಮತಿ ಪಡೆದು ದಾವಣಗೆರೆಗೆ ಬಂದಿದ್ದೆ  ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಏಪ್ರಿಲ್ 5 ರಂದು ದಾವಣಗೆರೆಗೆ ಬಂದಿದ್ದೆ ಎಂದರು.

Key words: openly, asked , tickets , Muslims, Minister, Zameer Ahmed Khan