Friday, October 16, 2026

Dasara Wishes

Happy Dasara
Home Front Page ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡ್ತೇನೆ-ರಾಮಲಿಂಗರೆಡ್ಡಿ

ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡ್ತೇನೆ-ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,13,2026 (www.justkannada.in): ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಹಿರಿಯ ಶಾಸಕರು ದೆಹಲಿಗೆ ಭೇಟಿ ವಿಚಾರ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಸಿಎಂ ಬದಲಾವಣೆಗಲ್ಲ ಸಚಿವ ಸ್ಥಾನಕ್ಕಾಗಿ ಹೋಗಿದ್ದಾರೆ. ಎರಡುವರೆ ವರ್ಷ ಬಳಿಕ ಸಂಫುಟ ಪುನಾರಚನೆ ಆಗುತ್ತೆ ಎಂಬುದಿತ್ತು. ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದರು.

ಸಿಎಂ ಬದಲಾವಣೆ ವಿಚಾರದ ಬಗ್ಗೆ ಕೇಳುವುದಕ್ಕೆ ಬರಬೇಡಿ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲು ದೆಹಲಿಗೆ ಹೋಗಿದ್ದಾರೆ ಹೈಕಮಾಂಡ್  ಹೇಳಿದರೆ ಖಂಡಿತ ಸಚಿವ ಸ್ಥಾನ ಬಿಡುತ್ತೇನೆ  ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words:  high command, minister post, Ramalingareddy