Saturday, October 17, 2026

Dasara Wishes

Happy Dasara
Home Front Page ಕಾಫಿನಾಡಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಟೆಂಪಲ್ ರನ್

ಕಾಫಿನಾಡಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಟೆಂಪಲ್ ರನ್

ಚಿಕ್ಕಮಗಳೂರು,ಏಪ್ರಿಲ್,13,2026 (www.justkannada.in): ಕಾಫಿನಾಡಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಟೆಂಪಲ್ ರನ್ ನಡೆಸಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಸಿಎಂ ಎನ್.ಆರ್.ಪುರದಲ್ಲಿ ವಾಸ್ತವ್ಯ ಹೂಡಿದರೆ, ಪತ್ನಿ ಪಾರ್ವತಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಿನ್ನೆ ಮಧ್ಯಾಹ್ನವೇ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ ಪಾರ್ವತಿ, ಮಧ್ಯಾಹ್ನ 3 ಗಂಟೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದರ್ಶನ ಪಡೆದರು. ಬಳಿಕ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ನಂತರ ಶಾರದಾಂಬೆ ಮಠದಲ್ಲೇ ವಾಸ್ತವ್ಯ ಹೂಡಿದ ಪಾರ್ವತಿ ಅವರು, ಇಂದು ಮತ್ತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೀಗ, ಎನ್.ಆರ್.ಪುರ ಐಬಿಯಲ್ಲಿ ತಂಗಿದ್ದ ಸಿಎಂ ಮಧ್ಯಾಹ್ನ 1 ಗಂಟೆಗೆ ಹಿಂತಿರುಗಲಿದ್ದು, ಸುಮಾರು 38 ಕೋಟಿ ರೂಪಾಯಿ ವೆಚ್ಚದ ಸೇತುವೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ವಾಪಸ್ಸಾಗಲಿದ್ದಾರೆ. ಈ ಕಾರ್ಯಕ್ರಮಗಳು ಎನ್.ಆರ್.ಪುರ–ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿವೆ.

Key words: CM Siddaramaiah,  wife, temple run, Chikkamagalore