ಮಂಡ್ಯ, APRIL.10,2026: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರ ನೇತೃತ್ವದಲ್ಲಿ ಏಪ್ರಿಲ್ 17 ರಂದು ಜಿಲ್ಲಾ ಮಟ್ಟದ ಮಹಿಳಾ ಅಹವಾಲು ಸ್ವೀಕಾರ ಸಭೆ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆಯುವ ಈ ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಪೊಲೀಸ್ ಅಧೀಕ್ಷಕ, ಜಿಲ್ಲಾ ವೈದ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಹಿಳೆಯರ ಅಹವಾಲುಗಳನ್ನು ಆಲಿಸಲಿದ್ದಾರೆ.
ಸಭೆಯಲ್ಲಿ ಮಹಿಳೆಯರು ನೇರವಾಗಿ ತಮ್ಮ ಸಮಸ್ಯೆಗಳನ್ನು ಮಂಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08232-227336 / 221315 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆದರೆ, “ಮಹಿಳಾ ಜನ್‌ಸುನ್ವಾಯಿ” ಎಂಬ ಹೆಸರಿನ ಬಳಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕನ್ನಡ ರಾಜ್ಯದಲ್ಲೇ ‘ಜನಸುನ್ವಾಯಿ’ ಎಂಬ ಹಿಂದಿ ಪದಪ್ರಯೋಗ ಬಳಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, “ಅಹವಾಲು ಸ್ವೀಕಾರ ಸಭೆ” ಎಂಬ ಶುದ್ಧ ಕನ್ನಡ ಪದ ಬಳಕೆ ಮಾಡಬಹುದಿತ್ತು ಎಂಬ ಟೀಕೆ ಕೇಳಿಬಂದಿದೆ.

ಹಿಂದಿ ಹೇರಿಕೆ ವಿರುದ್ಧ ಮಾತಾಡುವ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿ ಹಿಂದಿ ಪದಗಳ ಬಳಕೆಗೆ ಉತ್ತೇಜನ ನೀಡುತ್ತಿರುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಕನ್ನಡ ಪ್ರಾಮುಖ್ಯತೆಯ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕೆಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.
Key words: Mandya, Women’s Grievance Meet, Sparks Language Row

SUMMARY:
Mandya Women’s Grievance Meet Sparks Language Row, State Women’s Commission Chairperson, Dr. Nagalakshmi Choudhary.
Mandya: A women’s grievance meeting will be held on April 17 at 11 AM at the Zilla Panchayat Cauvery Hall, led by State Women’s Commission Chairperson Dr. Nagalakshmi Choudhary. District officials will attend to hear complaints directly from women.

However, the use of the term “Jan Sunwai” has triggered criticism, with many questioning why a Hindi term was used instead of a Kannada equivalent like “grievance hearing.”
The issue has sparked debate, with critics accusing the Congress-led government of promoting Hindi despite opposing its imposition.







