Sunday, August 23, 2026

BDA Apartments

Home Front Page ಮೈಸೂರು: ತಲಕಾಡು ಗ್ರಾಮ ಪಂಚಾಯಿತಿಯಲ್ಲಿ ವಸತಿ ಯೋಜನೆ ಅನುದಾನ ‘ಸ್ವಾಹ’ !

ಮೈಸೂರು: ತಲಕಾಡು ಗ್ರಾಮ ಪಂಚಾಯಿತಿಯಲ್ಲಿ ವಸತಿ ಯೋಜನೆ ಅನುದಾನ ‘ಸ್ವಾಹ’ !

ಮೈಸೂರು, ಅಕ್ಟೋಬರ್ 27, 2019 (www.justkannada.in): ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮ ಪಂಚಾಯಿತಿ ನಾನಾ ವಸತಿ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿ ವಸತಿ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನವವನ್ನು ದುರುಪಯೋಗ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಅನುದಾನ ದುರುಪಯೋಗ ಮಾಡಿಕೊಂಡಿರುವ ಫಲಾನುಭವಿಗಳಿಂದ ಶೇ.11ರಷ್ಟು ಬಡ್ಡಿಯೊಂದಿಗೆ ಅನುದಾನ ವಾಪಸ್ ಪಡೆಯುವುದು ಹಾಗೂ ತಪ್ಪಿತಸ್ಥ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಲು ಜಿಪಂ ಸಿಇಒ ಸೂಚನೆ ನೀಡಿದ್ದಾರೆ.

ತಲಕಾಡು ಗ್ರಾಮ ಪಂಚಾಯಿತಿಯಲ್ಲಿ ಬಸವ ವಸತಿ ಯೋಜನೆಯಡಿ ಗೌರಾಂಬಿಕ ಹಾಗೂ ಸಿಂಧು ಎಂಬವರಿಗೆ ತಲಾ 1.2 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಆ ಇಬ್ಬರೂ ಅತ್ತೆ ಸೊಸೆಯಾಗಿದ್ದಾರೆ.

ಈ ಮೂಲಕ ಒಂದೇ ಕುಟುಂಬದ ಇಬ್ಬರಿಗೆ ಅನುದಾನ ನೀಡುವ ಮೂಲಕ ವಂಚನೆ ಎಸಗಲಾಗಿದೆ.