ಒಂದೇ ವ್ಯಕ್ತಿಗೆ ಎರಡು ನಿವೇಶನ: ಮುಡಾ ಅಧಿಕಾರಿಗಳ ‘ಕರಾಮತ್ತು’ !

ಮೈಸೂರು, ಅಕ್ಟೋಬರ್ 27, 2019 (www.justkannada.in): ಒಂದೇ ವ್ಯಕ್ತಿಗೆ ಎರಡು ನಿವೇಶನ ಮಂಜೂರು ಮಾಡುವ ಮೂಲಕ ಮುಡಾ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ.

ಸಿಬ್ಬಂದಿಗಳ ಜಾಣಕುರುಡುತನಕ್ಕೆ ಸಾಕ್ಷಿಯಾಗಿದೆ. ಒಂದೇ ವ್ಯಕ್ತಿ ಎರಡು ನಿವೇಶನದ ಮಾಲೀಕರಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಕುವೆಂಪುನಗರದ ನಿವಾಸಿ ರಾಜೇಶ್ವರಿ ಎಂಬುವವರಿಗೆ ಎರಡು ನಿವೇಶನ ನೀಡಲಾಗಿದೆ.

ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರರಿಂದ ಈ ಅಕ್ರಮ ಬಯಲಾಗಿದೆ. ಶಾಂತವೇರಿ ಗೋಪಾಲಗೌಡ ನಗರದಲ್ಲಿ ೨೦೩೦ ವಿಸ್ತೀರ್ಣದ ನಿವೇಶನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ನಗರ ಬಡಾವಣೆಯಲ್ಲಿ ೩೦೪೦ ವಿಸ್ತೀರ್ಣದ ನಿವೇಶನ ಒಬ್ಬ ವ್ಯಕ್ಯಿಗೆ ಮಂಜೂರು ಮಾಡಲಾಗಿದೆ.

ವಿಚಿತ್ರ ಅಂದ್ರೆ ಎರಡು ನಿವೇಶನದ ಅರ್ಜಿ ದಿನಾಂಕ ಗಮನಿಸಿದ್ರೆ ಗೋಲ್ಮಾಲ್ ನಡೆದಿರೊ ಶಂಕೆ ಇದೆ. ಒಂದು ನಿವೇಶನದ ಅರ್ಜಿ ಮಾರ್ಚ್ ೫,೧೯೯೨ ದಿನಾಂಕದಲ್ಲಿದ್ದರೆ ಮತ್ತೊಂದು ನಿವೇಶನದ ಅರ್ಜಿ ೫-೧೩-೧೯೯೨ ದಿನಾಂಕದಲ್ಲಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಆರ್ ಟಿ ಐ ಕಾರ್ಯಕರ್ತ ನಾಗೇಂದ್ರ ಮನವಿ. ಮುಡಾ ಆಯುಕ್ತರಿಗೆ ಆರ್ ಟಿ ಐ ಕಾರ್ಯಕರ್ತ ನಾಗೇಂದ್ರ ಮನವಿ ಮಾಡಿದ್ದಾರೆ.