ಅಪಘಾತದಲ್ಲಿ ಕಾರು  ಹೊತ್ತಿ ಉರಿದು ಮೂವರು ಸಜೀವ ದಹನ

ತುಮಕೂರು,ಏಪ್ರಿಲ್,1,2026 (www.justkannada.in):  ಸೇತುವೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಬಳಿಕ ಹೊತ್ತಿ ಉರಿದು ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಗಹಳ್ಳಿ ತಾಲ್ಲೂಕು ಹುಳಿಯಾರು ಬಳಿ ಕೋರಗೆರೆ ಸೇತುವೆ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾರು ವೇಗವಾಗಿ ಬಂದು ಸೇತುವೆ ತಡೆಗೋಡೆಗೆ ಡಿಕ್ಕಿಹೊಡೆದಿದ್ದು ಡಿಕ್ಕಿ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡು ಮೂವರು ಸಜೀವ ದಹನವಾಗಿದ್ದಾರೆ  ಎನ್ನಲಾಗಿದೆ.

Key words: Three people, burnt alive, car accident