ಹೃದಯಸ್ಪರ್ಶಿ ಘಟನೆ : ತುತ್ತು ನೀಡಿ ಸಾಕಿ ಸಲುಹಿದ ವೃದ್ದೆ ಸಾವಿಗೆ ಕಣ್ಣೀರಿಟ್ಟ ವಾನರ

ರಾಮನಗರ,ಏಪ್ರಿಲ್,1,2026 (www.justkannada.in): ಒಂದೆಡೆ ಮಾನವ–ಪ್ರಾಣಿ ಸಂಘರ್ಷ ತಾರಕಕ್ಕೇರುತ್ತಿರುವ ಕಾಲಘಟ್ಟ… ಇನ್ನೊಂದೆಡೆ ಮಾನವೀಯತೆಯ ಮೌಲ್ಯವನ್ನು ಮರುಸ್ಮರಿಸುವ ಅಪೂರ್ವ ಘಟನೆಗಳು ಸಮಾಜವನ್ನು ಕಾಡುತ್ತವೆ. ಅಂತಹ ಹೃದಯಸ್ಪರ್ಶಿ ಘಟನೆ ರಾಮನಗರದಲ್ಲಿ ಕಂಡುಬಂದಿದೆ.

ಚಿಕ್ಕ ವಾನರ ಮರಿಯೊಂದಕ್ಕೆ ಅಕ್ಕರೆಯಿಂದ ತುತ್ತು ನೀಡಿ ಸಾಕಿ ಸಲುಹಿದ ವೃದ್ದೆ ಪಾರ್ವತಮ್ಮ ಮತ್ತು ಆ ವಾನರದ ನಡುವಿನ ಅನನ್ಯ ಬಂಧ ಎಲ್ಲರ ಗಮನ ಸೆಳೆದಿತ್ತು. ಮಾತಿಲ್ಲದ ಪ್ರಾಣಿಗೂ ಮಮತೆ ನೀಡಿದ ಪಾರ್ವತಮ್ಮನ ಮನುಷ್ಯತ್ವ ಸ್ಥಳೀಯರ ಮನ ಗೆದ್ದಿತ್ತು. ದಿನವೂ ಆಕೆಯ ಕೈಯಿಂದ ಆಹಾರ ಪಡೆದ ವಾನರ, ಆಕೆಯನ್ನು ತನ್ನದೇ ವ್ಯಕ್ತಿಯಂತೆ ಕಾಣುತ್ತಿತ್ತು.

ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದ ಪಾರ್ವತಮ್ಮ, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು. ರಾಮನಗರದ ರಾಯರದೊಡ್ಡಿಯಲ್ಲಿರುವ ಮಗಳ ಮನೆಯಲ್ಲಿ ವಾಸವಿದ್ದ ಅವರು ಬದುಕಿನ ಪಯಣ ಮುಗಿಸಿದರು.ಆದರೆ ಅಲ್ಲಿ ಕಂಡುಬಂದ ದೃಶ್ಯ ಎಲ್ಲರ ಮನ ಕಲುಕುವಂತಿತ್ತು.

ತನ್ನನ್ನು ಸಾಕಿ ಬೆಳೆಸಿದ ಪಾರ್ವತಮ್ಮರ ಮೃತದೇಹದ ಬಳಿ ವಾನರ ಕುಳಿತಿದ್ದು, ಕಣ್ಣೀರಿನಿಂದ ಹೊರಳಾಡಿದ ಕ್ಷಣ ಎಲ್ಲರನ್ನೂ ಮೌನಗೊಳಿಸಿತು. ಮನುಷ್ಯನಂತೆ ನೋವನ್ನು ವ್ಯಕ್ತಪಡಿಸಿದ ಆ ವಾನರ, ತನ್ನದೇ ರೀತಿಯಲ್ಲಿ ಅಂತಿಮ ವಿದಾಯ ಹೇಳಿದ ದೃಶ್ಯ ಅಲ್ಲಿ ಇದ್ದವರ ಹೃದಯ ಮುಟ್ಟಿತು.

ಸ್ಥಳೀಯರು ಈ ಅಪರೂಪದ ಕ್ಷಣಕ್ಕೆ ಮೂಕ ಸಾಕ್ಷಿಯಾದರು. “ಮಾತಿಲ್ಲದ ಪ್ರಾಣಿಗೂ ಪ್ರೀತಿ ಅರ್ಥವಾಗುತ್ತದೆ” ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಪಾರ್ವತಮ್ಮನ ಅಗಲಿಕೆ ಕೇವಲ ಕುಟುಂಬಕ್ಕಷ್ಟೇ ಅಲ್ಲ… ಆ ವಾನರಕ್ಕೂ ತುಂಬಲಾರದ ನಷ್ಟವಾಗಿದೆ. ಮಾನವೀಯತೆ ಮತ್ತು ಮಮತೆಯ ಬಾಂಧವ್ಯಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.

In a time when human–animal conflict is rising, a deeply touching incident from Ramanagara highlights an extraordinary bond of compassion.

An elderly woman, Parvathamma, lovingly fed and cared for a young monkey, forming a rare and emotional connection. The monkey grew attached to her like family.

Parvathamma, a native of B.V. Halli village in Channapatna taluk, passed away due to a heart attack while staying at her daughter’s house in Rayaradoddi, Ramanagara.

In a heartbreaking moment, the monkey sat beside her lifeless body, visibly grieving and clinging to her, as if bidding a final farewell. The emotional scene left locals in silence.

The incident is a powerful reminder that love and care transcend words—even animals understand and return human affection.

Key words: woman, death, lovingly, fed ,cared, monkey