ತ್ರಿಭಾಷಾ ಸೂತ್ರ ತಂದಿದ್ದು ಮೋದಿಯಲ್ಲ, ನೆಹರು: ಅವರಿಗೂ ಬೆಲೆ ಇಲ್ವಾ? ‘ಕೈ’ಗೆ ಕುಟುಕಿದ ಆರ್. ಅಶೋಕ್

ಬೆಂಗಳೂರು,ಮಾರ್ಚ್,30,2026 (www.justkannada.in): ದೇಶದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿಯಲ್ಲ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಎಂದು ಕಾಂಗ್ರೆಸ್ ಗೆ ವಿಪಕ್ಷ ನಾಯಕ ಆರ್.ಅಶೋಕ್ ಕುಟುಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಂದಿರಾ ಗಾಂಧಿ ಕೂಡ ಹಿಂದಿ ಭಾಷೆ ಬಗ್ಗೆ ಹೆಚ್ಚು  ಆಸಕ್ತಿ ವಹಿಸಿದ್ದರು.  ಹಾಗಾದರೆ ನೆಹರು, ಇಂದಿರಾ ಗಾಂಧಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದರು.

ತಮಿಳುನಾಡು ಕೇರಳ ಮುಸ್ಲಿಮರು ಅಯಾ ರಾಜ್ಯ  ಭಾಷೆ ಮಾತನಾಡುತ್ತಾರೆ 2 ರಾಜ್ಯಗಳಲ್ಲಿ ತಮಿಳು ಮಲಯಾಳಂ ಕಡ್ಡಾಯವಾಗಿ ಮಾತನಾಡುತ್ತಾರೆ ಆದ್ರೆ ಕರ್ನಾಟಕದಲ್ಲಿ ಇನ್ನು ಯಾಕೆ ಮಾತನಾಡಲ್ಲ.  ಕನ್ನಡಿಗರು ಬೇರೆ ರಾಜ್ಯಕ್ಕೆ ಉದ್ಯೋಗಕ್ಕೆ ಹೋದರೆ ಯಾವ ಭಾಷೆ ಮಾತನಾಡಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರಿಗೆ ಈಗ ಮೋದಿ ಮೇಲೆ ಕೋಪವಿದೆ. ಮೋದಿಯೇ ತ್ರಿಭಾಷಾ ಸೂತ್ರ ತಂದರು ಎಂದು ಸಿದ್ದರಾಮಯ್ಯ ಬಿಲ್ಡಪ್ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ಮೇಲೆ ಕಲ್ಲು  ಹಾಕುತ್ತಿದ್ದಾರೆ. ಕಾಂಗ್ರೆಸ್ ಎಸ್ ಎಸ್ ಎಲ್ ಸಿ ಪರೀಕ್ಷೆ ಸಮಯದಲ್ಲಿ ರಾಜಕಾರಣ  ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words:  three-language formula, Nehru, R. Ashok, Congress