Tuesday, August 11, 2026

BDA Apartments

Home Front Page ಯುವಕರಿಗೆ ನಿರಾಸೆಯಾಗಬಾರದೆಂದು IPL ಪಂದ್ಯಗಳಿಗೆ ಅನುಮತಿ-ಗೃಹ ಸಚಿವ ಪರಮೇಶ್ವರ್

ಯುವಕರಿಗೆ ನಿರಾಸೆಯಾಗಬಾರದೆಂದು IPL ಪಂದ್ಯಗಳಿಗೆ ಅನುಮತಿ-ಗೃಹ ಸಚಿವ ಪರಮೇಶ್ವರ್

ತುಮಕೂರು,ಮಾರ್ಚ್,28,2026 (www.justkannada.in): ಯುವಕರಿಗೆ ನಿರಾಸೆಯಾಗಬಾರದೆಂದು ಬೆಂಗಳೂರಿನ ಚಿನ್ನಸ್ವಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಚಿನ್ನಸ್ವಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ ಕೊಡದಿದ್ದರೆ ಬೆಂಗಳೂರು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಂಡು ಪಂದ್ಯಕ್ಕೆ  ಅನುಮತಿ ನೀಡಲಾಗಿದೆ. ಕಳೆದ ಮಾರ್ಚ್ ನಲ್ಲಿ ಅಹಿತಕರ ಘಟನೆಯಿಂದ11 ಜನ  ಮೃತಪಟ್ಟಿದ್ದರು ಎಂದರು.

ಎರಡು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿಎಂ ಸಿದ್ದರಾಮಯ್ಯ ಅವರ ಏಪ್ರಿಲ್ 3ರ    ಮಧುಗಿರಿ ಪ್ರವಾಸ ಮುಂದೂಡಿಕೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Key words: IPL, matches, allowed, Home Minister, Parameshwar