Wednesday, August 12, 2026

BDA Apartments

Home Front Page ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,26,2026 (www.justkannada.in): ನಾನು ಯಾವತ್ತಿಗೂ  ಟೀಕೆಗಳನ್ನು ಸ್ವಾಗತ ಮಾಡುವವನು.  ಟಿಖೆ ಮಾಡಿದರು ಅಂತಾ ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಕುರಿತು ಉತ್ತರ ನೀಡುವ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಚಿನ್ನವನ್ನ ಪರೀಕ್ಷೆ ಮಾಡಬೇಕಾದರೆ ಬೆಂಕಿಗೆ ಹಾಕುತ್ತಾರೆ. ಮನುಷ್ಯರನ್ನ ಪರೀಕ್ಷೆ ಮಾಡಬೇಕಾದರೆ ಟೀಕೆಗಳು ಬರುತ್ತವೆ. ಟೀಕೆ ಮಾಡಿದರು ಅಂತಾ ಯಾರ ಮೇಲೂ ಸಿಟ್ಟು ಮಾಡಿಕೊಳ್ಳಲ್ಲ ಮಾಧ್ಯಮಗಳ ಮೇಲೂ ಸಿಟ್ಟು ಮಾಡಿಕೊಂಡಿಲ್ಲ. ನನ್ನ ಮನೆ ಮೇಲೆ ರೇಡ್ ಆದಾಗ ಬೇಕಾದಷ್ಟು ನೋಡಿದ್ದೇನೆ.  ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದರು.

ಪಾಸಿಟಿವ್ ಆಲೋಚನೆ ಸಮಸ್ಯೆಗೆ ಪರಿಹಾರ ಕಲ್ಪಿಸುಬಹುದು ಇಂಧನ ಇಲಾಖೆಯನ್ನೇ ಉತ್ತಮವಾಗಿ ನಿರ್ವಹಣೆ ಮಾಡಿದ್ದೇನೆ ತಪ್ಪು ಕಂಡು ಹಿಡಿಯಲು ನನ್ನ ಸ್ನೇಹಿತರು ಪ್ರಯತ್ನ ಮಾಡಿದ್ದಾರೆ. ಬೆಂಗಳೂರು 14 ಕೋಟಿ ಜನಸಂಖ್ಯೆ ಇದೆ.  13 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಒಪ್ಪಿಕೊಳ್ಳೋಣ. ಬೆಂಗಳೂರು ನಗರದ ರಸ್ತೆ ವಿಸ್ತೀರ್ಣ ಶೇ. 8 ರಷ್ಟು ಇದೆ.  ಬೇರೆ ನಗರಗಳಲ್ಲಿ ರಸ್ತೆ ವಿಸ್ತೀರ್ಣ ಶೇ 16 ರಷ್ಟು ಇದೆ  ಎಂದರು.

Key words: welcome, criticism, DCM, DK Shivakumar