Saturday, August 15, 2026

BDA Apartments

Home Front Page ಕಸ ವಿಲೇವಾರಿಗೆ 2,250 ಕೋಟಿ ರೂ ಖರ್ಚು ಮಾಡುತ್ತಿದ್ದೇವೆ- ಸಚಿವ ಭೈರತಿ ಸುರೇಶ್

ಕಸ ವಿಲೇವಾರಿಗೆ 2,250 ಕೋಟಿ ರೂ ಖರ್ಚು ಮಾಡುತ್ತಿದ್ದೇವೆ- ಸಚಿವ ಭೈರತಿ ಸುರೇಶ್

ಬೆಂಗಳೂರು,ಮಾರ್ಚ್,24,2026 (www.justkannada.in): ಕಸ ವಿಲೇವಾರಿಗಾಗಿಯೇ ರಾಜ್ಯ ಸರ್ಕಾರ 2,250 ಕೋಟಿ ರೂ ಖರ್ಚು ಮಾಡುತ್ತಿದೆ ಎಂದು  ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ವಿವಿಧ ನಗರಗಳ ಸ್ವಚ್ಚತೆ ಬಗ್ಗೆ  ಎಂಎಲ್ ಸಿ ಭಾರತಿ ಶೆಟ್ಟಿ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಕೇಂದ್ರ ಸರ್ಕಾರದ 1980 ರಡಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿದಿನವೂ ಕಸ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತೆ.  ಕಸ ವಿಲೇವಾರಿಗೆ 2250 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ.  ಗ್ರೇಟರ್ ಬೆಂಗಳೂರು ಬಿಟ್ಟು 7304 ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. 11 ನಗರಸಭೆ ಸುತ್ತಮುತ್ತಾ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ನಿಧಾನಗತಿಯಲ್ಲಿದೆ ಎಂದು  ತಿಳಿಸಿದರು.

Key words: spending, Rs 2,250 crore , garbage disposal, Minister, Bhairati Suresh