Wednesday, August 5, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಬಜೆಟ್ ಗೆ ಆಡಳಿತ ಪಕ್ಷದಲ್ಲೇ ವಿರೋಧ- ಬಿ.ವೈ ವಿಜಯೇಂದ್ರ

ಸಿಎಂ ಸಿದ್ದರಾಮಯ್ಯ ಬಜೆಟ್ ಗೆ ಆಡಳಿತ ಪಕ್ಷದಲ್ಲೇ ವಿರೋಧ- ಬಿ.ವೈ ವಿಜಯೇಂದ್ರ

ಕಲಬುರಗಿ,ಮಾರ್ಚ್,20,2026 (www.justkannada.in): ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗೆ ಆಡಳಿತ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಬಜೆಟ್ ದೂರದೃಷ್ಠಿ ಇಲ್ಲದ ಬಜೆಟ್. ಸರ್ಕಾರ ರಾಜ್ಯದ ಜನರ ಭರವಸೆ ನುಚ್ಚ ನೂರು ಮಾಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಎಂದು ಕಿಡಿಕಾರಿದರು.

ಪ್ರಿಯಾಂಕ್ ಖರ್ಗೆ ಅಂತರಾಷ್ಟ್ರಿಯ ವಿಷಯ ಮಾತನಾಡೋದು ಬಿಟ್ಟು ಜಿಲ್ಲೆ ಅಭಿವೃದ್ದಿ ಬಗ್ಗೆ ಯೋಚಿಸಲಿ

ಗೋವಿಂದರಾವ್ ವರದಿ ಪ್ರಕಾರ ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಶೇ. 75 ರಷ್ಟು  ಪ್ರಾದೇಶಿಕ ಅಸಮತೋಲನ ಇದೆ ಎಂದು ವರದಿ  ಇದೆ. ಪ್ರಿಯಾಂಕ್ ಖರ್ಗೆ ಪ್ರಧಾನಿ ಬಗ್ಗೆ ಮಾತನಾಡುತ್ತಾರೆ ಇದು ಅತ್ಯಂತ ದುರ್ದೈವದ ಸಂಗತಿ  ಕಲ್ಯಾಣ ಕರ್ನಾಟಕ ಭಾಗ ಪ್ರಿಯಾಂಕ್ ಖರ್ಗೆ ಹಿಡಿತದಲ್ಲಿದೆ ಪ್ರಿಯಾಂಕ್ ಖರ್ಗೆ ಅಂತರಾಷ್ಟ್ರಿಯ ವಿಷಯ ಮಾತನಾಡೋದು ಬಿಟ್ಟು ತಮ್ಮ ಜಿಲ್ಲೆ ಕಲಬುರಗಿ ಅಭೀವೃದ್ದಿ ಕಡೆ ಗಮನಹರಿಸಲಿ  ಎಂದು ಬಿವೈ ವಿಜಯೇಂದ್ರ ಟಾಂಗ್ ಕೊಟ್ಟರು.

Key words: Opposition, CM, Siddaramaiah, budget, BY Vijayendra