ಮಂಡ್ಯ,ಮಾರ್ಚ್,16,2026 (www.justkannada.in): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 110.44 ಅಡಿಗೆ ಇಳಿದಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಆರ್ ಎಸ್ ಜಲಾಶಯದ ನೀರಿನ ಗರಿಷ್ಟ ಸಾಮರ್ಥ್ಯ124.80 ಅಡಿಗಳಿದ್ದು ಸದ್ಯ 110.44 ಅಡಿ ನೀರಿನ ಮಟ್ಟ ಕುಸಿದಿದೆ. ಕಟ್ಟು ಪದ್ದತಿಯಲ್ಲಿ ರೈತರ ಬೆಳೆಗಳಿಗೆ ನಾಲೆಗಳಿಗೆ ನೀರು ಬಿಡಲಾಗುತ್ತದೆ.
ಜೂನ್ ಜುಲೈವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಮೈಸೂರು ಬೆಂಗಳೂರಿಗೆ ಈ ವರ್ಷ ಕುಡಿಯುವ ನೀರಿಗೂ ಸಮಸ್ಯೆ ಎದಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಕೆಆರ್ ಎಸ್ ಜಲಾಶಯ ಭರ್ತಿಯಾಗಿತ್ತು.
Key words: KRS Dam, water level, 110 feet







