Sunday, September 13, 2026

BDA Apartments

ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಪೊಲೀಸ್ ಸಿಬ್ಬಂದಿ ರಜೆ ರದ್ದು BD...
Home Front Page ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಪೊಲೀಸ್ ಸಿಬ್ಬಂದಿ ರಜೆ ರದ್ದು

ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಪೊಲೀಸ್ ಸಿಬ್ಬಂದಿ ರಜೆ ರದ್ದು

ನವದೆಹಲಿ,ಮಾರ್ಚ್,14,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಈ ಮಧ್ಯೆ ದೆಹಲಿಯಲ್ಲಿ ಪೊಲೀಸ್ ಸಿಬ್ಬಂದಿಯ ರಜೆ ರದ್ದುಪಡಿಸಲಾಗಿದೆ.

ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆ ಹಿನ್ನೆಯಲ್ಲಿ ಪರಿಸ್ಥಿತಿಯನ್ನ ನಿರ್ವಹಿಸಲು ಹಲವೆಡೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.  ಹೀಗಾಗಿ ದೆಹಲಿಯಲ್ಲಿ ಅಲ್ಲಿನ ಸರ್ಕಾರ ಪೊಲೀಸ್ ಸಿಬ್ಬಂದಿ ರಜೆ ರದ್ದುಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದಿನ ಸೂಚನೆ ಬರುವವರೆಗೆ ದಿನನಿತ್ಯದ ರಜೆ ನೀಡಲಾಗುವುದಿಲ್ಲ ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.

Key words: Disruption, LPG cylinder, supply, Police, leave, cancelled