ನವದೆಹಲಿ ,ಮಾರ್ಚ್,12,2026 (www.justkannada.in): ಕಳೆದ 5 ದಿನಗಳಲ್ಲಿ ಎಲ್ ಪಿಜಿ ಉತ್ಪಾದನೆ ಶೇ. 28ರಷ್ಟು ಹೆಚ್ಚಾಗಿದೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದರು. 
ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತದ ಕಚ್ಚಾ ತೈಲ ಪೂರೈಕೆ ಸ್ಥಿತಿ ಸುಭದ್ರವಾಗಿದೆ. ಭಾರತಕ್ಕೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಕೊರತೆ ಆಗಿಲ್ಲ. ಇಂದಿನಿಂದಲೇ ಕಮರ್ಷಿಯಲ್ ಗ್ಯಾಸ್ ಪೂರೈಕೆಯಾಗುತ್ತೆ. ಸಿಲಿಂಡರ್ ಪೂರೈಕೆ ಮೊದಲ ಆದ್ಯತೆಯಾಗಿದೆ ಎಂದರು.
ವಿದೇಶದಿಂದ ಕಚ್ಚಾತೈಲ ಆಮದಾಗುತ್ತಿದೆ. ಹಾರ್ಮೇಜ್ ಜಲಸಂಧಿ ಹೊರತುಪಡಿಸಿ ಬೇರೆ ಕಡೆಯಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ಇಂದಿನಿಂದಲೇ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುತ್ತೇವೆ. “ಬಿಕ್ಕಟ್ಟಿನ ಮೊದಲು, ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಸರಿಸುಮಾರು 45% ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕ ಸಾಗುತ್ತಿತ್ತು. ಪ್ರಧಾನಿಯವರ ಅತ್ಯುತ್ತಮ ರಾಜತಾಂತ್ರಿಕ ಸಂಪರ್ಕ ಮತ್ತು ಸದ್ಭಾವನೆಗೆ ಧನ್ಯವಾದಗಳು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದರು.
Key words: LPG, Production, increase, supply, Union Minister, Hardeep Singh Puri







