Wednesday, July 29, 2026

BDA Apartments

Home Front Page ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ , ಪೂರೈಕೆಯಲ್ಲಿ ವ್ಯತ್ಯಯ: ಕೇಂದ್ರವೇ ಹೊಣೆ- ಡಿಕೆ ಶಿವಕುಮಾರ್

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ , ಪೂರೈಕೆಯಲ್ಲಿ ವ್ಯತ್ಯಯ: ಕೇಂದ್ರವೇ ಹೊಣೆ- ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಗ್ಯಾಸ್ ಸಿಲಿಂಡರ್  ಬೆಲೆ ಹೆಚ್ಚಾಗಿದೆ.  ಎಲ್ಲಿಯೂ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ ಬೆಲೆ ಜಾಸ್ತಿ ಬಗ್ಗೆ ಸಂಸದರು ಯಾರೂ ಮಾತನಾಡುತ್ತಿಲ್ಲ.  ಗ್ಯಾಸ್ ಗೆ ಪರ್ಯಾಯವಾಗಿ ಸೌದೆ ವ್ಯವಸ್ಥೆ ಮಾಡಿಕೊಡಬೇಕು ಇದಕ್ಕೆ ಕೋರ್ಟ್ ಅನುಮತಿ ಕೊಡಬೇಕು ಎಂದರು.

ಗ್ಯಾಸ್ ಸಿಲಿಂಡರ್ ಪೆಟ್ರೋಲ್ ಬೆಲೆ ಜಾಸ್ತಿ ಆಗುತ್ತಿದೆ. ಆಹಾರ ಪದಾರ್ಥಗಳು ಸಿಗುತ್ತಿಲ್ಲ ಇದಕ್ಕೆ ಕೇಂದ್ರವೇ ಹೊಣೆ ಬೇರೆ ವಿಚಾರಕ್ಕೆ ಸಂಸದರು ಮಾತಾಡುತ್ತಾರೆ. ಇದಕ್ಕೆ ಮಾತಾಡಲಿ. ಕೇಂದ್ರ ಸರ್ಕಾರದ ಧೋರಣೆ ಖಂಡಿಸುತ್ತೇನೆ. ಈ ವಿಚಾರವನ್ನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Gas cylinder, price, hike, supply, disruptions, DK Shivakumar