ಬೆಂಗಳೂರು, ಮಾರ್ಚ್ 5: ‘ಬ್ರ್ಯಾಂಡ್ ಕರ್ನಾಟಕ’ (Brand Karnataka) ಕಾರ್ಯಕ್ರಮದ ಅಡಿ ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ವಿಶೇಷ ಆದ್ಯತೆ ನೀಡಲಾಗುವುದು. ಸುಮಾರು 4,000 ಉದ್ದಿಮೆಗಳಿಗೆ ಬ್ರ್ಯಾಂಡಿಂಗ್, ಉತ್ಪನ್ನಗಳ ಸ್ಥಾನೀಕರಣ (Product positioning), ಗುಣಮಟ್ಟದ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಅಗತ್ಯ ಬೆಂಬಲ ನೀಡಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್ಎಂಇ, ಗಣಿ, ಜವಳಿ ಮತ್ತು ಸಕ್ಕರೆ) ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದರು.
‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ’ (FKCCI) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶೀಯ, ಅಂತರರಾಷ್ಟ್ರೀಯ ಮಾರುಕಟ್ಟೆಗಳು ಹಾಗೂ ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ಥಳೀಯ ಉದ್ದಿಮೆಗಳು ಬೆಳೆಯಲು ಮತ್ತು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ಉಪಕ್ರಮವು ಗುರಿ ಹೊಂದಿದೆ ಎಂದು ಅವರು ವಿವರಿಸಿದರು.

ರಾಜ್ಯದ ಬೆನ್ನೆಲುಬು ಎಂಎಸ್ಎಂಇ ವಲಯ:
“ರಾಜ್ಯದಲ್ಲಿ ಸುಮಾರು 25 ಲಕ್ಷ ಎಂಎಸ್ಎಂಇಗಳಿದ್ದು, ಇವು ರಾಜ್ಯದ ಕೈಗಾರಿಕಾ ಮತ್ತು ಉದ್ಯೋಗ ಸೃಷ್ಟಿ ವ್ಯವಸ್ಥೆಯ ಬೆನ್ನೆಲುಬಾಗಿವೆ. ಇದರಲ್ಲಿ ಶೇ. 25 ರಷ್ಟು ಉದ್ದಿಮೆಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳಾ ಉದ್ಯಮಿಗಳ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ,” ಎಂದರು.
ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಬ್ರ್ಯಾಂಡಿಂಗ್ ಬಲಪಡಿಸುವಿಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ‘ಬ್ರ್ಯಾಂಡ್ ಕರ್ನಾಟಕ’ ಕಾರ್ಯಕ್ರಮವು ಎಂಎಸ್ಎಂಇಗಳಿಗೆ ವ್ಯವಸ್ಥಿತ ಬೆಂಬಲವನ್ನು ಒದಗಿಸಲಿದೆ. ಈ ಉಪಕ್ರಮವು ರಾಜ್ಯದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಚೌಕಟ್ಟಿನೊಂದಿಗೆ ಸಹಯೋಗ ಹೊಂದಿದ್ದು, ಪ್ರಾದೇಶಿಕ ಉತ್ಪನ್ನಗಳನ್ನು ಉತ್ತೇಜಿಸಲು ಹಾಗೂ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ. ಹಣಕಾಸು ಲಭ್ಯತೆ, ಮಾರ್ಗದರ್ಶನ (Mentorship) ಮತ್ತು ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

‘ರ್ಯಾಂಪ್’ (RAMP) ಯೋಜನೆಯಡಿ 6.40 ಕೋಟಿ ರೂ. ಮೀಸಲು:
ಎಂಎಸ್ಎಂಇ ಕಾರ್ಯಕ್ಷಮತೆ ಹೆಚ್ಚಿಸುವ ‘ರ್ಯಾಂಪ್’ (Raising and Accelerating MSME Performance – RAMP) ಕಾರ್ಯಕ್ರಮದ ಭಾಗವಾಗಿ, ಮಹಿಳಾ ನೇತೃತ್ವದ 240 ಎಂಎಸ್ಎಂಇಗಳಿಗಾಗಿ ವಿಶೇಷ ‘ವೇಗವರ್ಧಕ ಕಾರ್ಯಕ್ರಮ’ಗಳನ್ನು (Acceleration Programmes) ಸರ್ಕಾರ ಪ್ರಸ್ತಾಪಿಸಿದೆ. ತಲಾ ಆರು ತಿಂಗಳ ಅವಧಿಯ 12 ಬ್ಯಾಚ್ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವ್ಯವಸ್ಥಿತ ಮಾರ್ಗದರ್ಶನ ಮತ್ತು ಮಾರುಕಟ್ಟೆ ಜ್ಞಾನ ಒದಗಿಸಲಾಗುವುದು.
ಇದಲ್ಲದೆ, ಮಹಿಳಾ ಉದ್ದಿಮೆಗಳಲ್ಲಿ ನಾವೀನ್ಯತೆ (Innovation) ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಮಹಿಳಾ ಎಂಎಸ್ಎಂಇ ಹ್ಯಾಕಥಾನ್’ (Women MSME Hackathon) ಆಯೋಜಿಸಲಾಗುವುದು. ವಿಜೇತ 12 ಉದ್ದಿಮೆಗಳಿಗೆ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಹಾಗೂ ಕಾರ್ಯಕ್ರಮದ ಅನುಷ್ಠಾನ ವೆಚ್ಚಕ್ಕಾಗಿ 40 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹ್ಯಾಕಥಾನ್ ಹಾಗೂ ಇತರೆ ಹಲವಾರು ಕಾರ್ಯಕ್ರಮಗಳ ಮಾರ್ಗಸೂಚಿಗಳಿಗೆ ಎಂಎಸ್ಎಂಇ ನಿರ್ದೇಶನಾಲಯವು ಈಗಾಗಲೇ ಅನುಮೋದನೆ ನೀಡಿದ್ದು, ಅನುಷ್ಠಾನಗೊಳಿಸುವ ಏಜೆನ್ಸಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಹಿಳಾ ಉದ್ಯಮಶೀಲತೆಯನ್ನು ಬಲಪಡಿಸಲು ರ್ಯಾಂಪ್ (RAMP) ಕಾರ್ಯಕ್ರಮದಡಿ ಒಟ್ಟು 6.40 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಒಡೆಯರ್, “ಮಹಿಳೆ ಇಂದು ಮಾತ್ರವಲ್ಲ, ನಾಳೆಯ ಬಗ್ಗೆಯೂ ಆಲೋಚನೆ ಮಾಡುತ್ತಾಳೆ. ಇದು ಅವಳ ಯಶಸ್ಸಿಗೆ ಕಾರಣವಾಗಲಿದೆ. ನಾವು ಇದೇ ಸಮಯದಲ್ಲಿ ಪರಿಸರ ಉಳಿಸುವ ಕೆಲಸ ಮಾಡಬೇಕು.ವಾಯು, ಜಲ ಮಾಲಿನ್ಯ ಎಲ್ಲವೂ ಒಂದು ಸವಾಲಾಗಿದೆ. ನಾವು ಸುಸ್ಥಿರ ಅಭಿವೃದ್ಧಿ ಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ಈ ಎಲ್ಲಾ ಸಂಪನ್ಮೂಲಗಳನ್ನು ಉಳಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ನಟಿ ಸುಧಾ ಬೆಳವಾಡಿ ಹಾಗೂ ಎಫ್ಕೆಸಿಸಿಐ (FKCCI) ಅಧ್ಯಕ್ಷರಾದ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ ಪಿ ಶಶಿಧರ್, ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷೆ ಎನ್.ಆರ್ ಆಶಾ, ನಿಕಟಪೂರ್ವ ಅಧ್ಯಕ್ಷ ಎಂ ಜಿ ಬಾಲಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು
key words: Brand Karnataka, women-led MSMEs, 4,000 enterprises, branding and market access support, MSME Secretary Rohini Sindhuri

SUMMARY:
Brand Karnataka to prioritise women-led MSMEs; 4,000 enterprises to get branding and market access support: MSME Secretary Rohini Sindhuri
Bengaluru, March 5: The Brand Karnataka initiative will place a special focus on promoting women-led MSMEs, with around 4,000 enterprises set to receive handholding support for branding, product positioning, quality certification and market access, said MSME, Mines, Textiles & Sugar, Commerce and Industries Department, Secretary Rohini Sindhuri.
Addressing a Women’s Day event organised at the Federation of Karnataka Chambers of Commerce and Industry, she said the initiative aims to help local enterprises scale their presence in domestic and international markets as well as e-commerce platforms, strengthening the global competitiveness of Karnataka-based products.
Highlighting the scale of the sector, Rohini Sindhuri noted that Karnataka is home to nearly 25 lakh MSMEs, which form the backbone of the State’s industrial and employment ecosystem. Nearly 25 percent of these enterprises are owned by women, underlining the growing role of women entrepreneurs in driving economic activity across the State.
She said the Brand Karnataka programme will provide structured support to MSMEs in improving product standards, strengthening branding and expanding market reach. The initiative is also aligned with the State’s One District One Product (ODOP) framework, which promotes region-specific products and helps local enterprises access wider markets.
Emphasising the government’s commitment to strengthening the MSME ecosystem, Rohini Sindhuri said focused initiatives are being implemented to improve access to finance, mentorship, incubation and market linkages, with particular attention to empowering women entrepreneurs to scale their businesses and expand into new markets.
As part of the Raising and Accelerating MSME Performance (RAMP) programme, the government has also proposed a series of Acceleration Programmes aimed at enhancing the performance of 240 women-led MSMEs. These programmes will be organised into 12 cohorts, each of six months’ duration, providing structured mentorship, market guidance and capacity-building support.
In addition, a Women MSME Hackathon will be conducted to encourage innovation and entrepreneurship among women-led enterprises. Twelve winning enterprises will be awarded prize money of ₹10 lakh each, while ₹40 lakh has been earmarked towards programme implementation costs.
The guidelines for both the acceleration programme and the hackathon have been approved by the Directorate of MSME, and the process for selecting agencies to implement these interventions is currently underway.
A total of ₹6.40 crore has been allocated for women-focused interventions under the RAMP programme, aimed at strengthening women entrepreneurship and enabling women-led MSMEs to scale and compete in larger markets.

Rajmata Pramoda Devi Wadiyar of the Mysuru Royal Family said, “A woman does not think only about today; she also thinks about the future. This forward thinking is what leads to her success. At the same time, we must work towards protecting the environment. Air and water pollution have become major challenges, and we must move towards sustainable development. We must preserve these resources for the next generation.”
Actress Sudha Belawadi, FKCCI President Uma Reddy, Senior Vice President Sairam Prasad, Vice President B.P. Shashidhar, Women Empowerment Committee Chairperson N.R. Asha, and Immediate Past President M.G. Balakrishna, along with several other dignitaries, were present at the programme.
Women who have made notable achievements in various fields were honoured during the event.








