Sunday, September 13, 2026

BDA Apartments

Home Front Page ನಮ್ಮ ದೇಶಕ್ಕೆ ‘ಕಾಂಪ್ರಮೈಸ್ ಪ್ರಧಾನಿ’ ಸಿಕ್ಕಿದ್ದಾರೆ- ಮೋದಿ ವಿರುದ್ದ ರಾಹುಲ್ ಗಾಂಧಿ ಗುಡುಗು

ನಮ್ಮ ದೇಶಕ್ಕೆ ‘ಕಾಂಪ್ರಮೈಸ್ ಪ್ರಧಾನಿ’ ಸಿಕ್ಕಿದ್ದಾರೆ- ಮೋದಿ ವಿರುದ್ದ ರಾಹುಲ್ ಗಾಂಧಿ ಗುಡುಗು

ನವದೆಹಲಿ,ಮಾರ್ಚ್,5,2026 (www.justkannada.in): ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಭೀತಿ ಆವರಿಸಿದ್ದು ಈ ಮದ್ಯೆ  ಇರಾನ್ ಯುದ್ದ ನೌಕೆ  ಮೇಲೆ ಅಮೇರಿಕಾ ದಾಳಿ ನಡೆಸಿದ ವಿಚಾರವನ್ನ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇರಾನ್ ಯುದ್ದನೌಕೆ ಮೇಲೆ ಅಮೇರಿಕಾ ದಾಳಿ ಮಾಡಿದೆ. ಯುದ್ದ ನಮ್ಮ ಹಿತ್ತಲಿನವರೆಗೂ ಬಂದು ನಿಂತಿದೆ. ಮೋದಿಯವರು ಇನ್ನೂ ಮೌನವಾಗಿದ್ದಾರೆ. ನಮ್ಮ ದೇಶಕ್ಕೆ ಕಾಂಪ್ರಮೈಸ್ ಪ್ರಧಾನಿ ಸಿಕ್ಕಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದ  ಬಳಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ ನ ಯುದ್ಧನೌಕೆ ಮುಳುಗಡೆಯಾಗಿದೆ. ಭಾರತದ ವಿಶಾಖಪಟ್ಟಣದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ / ಮಿಲನ್ 2026’ ಅಭ್ಯಾಸದಲ್ಲಿ ನೌಕೆ ಭಾಗವಹಿಸಿತ್ತು. ಬಳಿಕ ಇರಾನ್‌ಗೆ ವಾಪಸ್‌ ಆಗುತ್ತಿದ್ದಾಗ ಮುಳುಗಡೆಯಾಗಿದೆ ಎನ್ನಲಾಗಿದೆ.

Key words: Iran, America, War, compromise PM, Modi, Rahul Gandhi