ಇಂದು ರಕ್ತ ಚಂದ್ರಗ್ರಹಣ: ಹಲವು ದೇಗುಲಗಳಲ್ಲಿ ದೇವರ ದರ್ಶನದ ಸಮಯ ಬದಲು

ಬೆಂಗಳೂರು,ಫೆಬ್ರವರಿ,3,2026 (www.justkannada.in): ಇಂದು ರಕ್ತಚಂದ್ರಗ್ರಹಣ  ಸಂಭವಿಸಲಿದ್ದು ವರ್ಷದ ಮೊದಲ ಚಂದ್ರ ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಹಲವು ದೇಗುಲಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆ ಆಗಿದ್ದು, ಕೆಲವು ದೇಗುಲಗಳು ಬಂದ್​ ಆಗಲಿದೆ.

ಹೋಳಿ ಹುಣ್ಣಿಮೆ ದಿನವೇ ಖಗೋಳದಲ್ಲಿ ರಕ್ತಚಂದ್ರ ಗ್ರಹಣ ಸಂಭವಿಸುತ್ತಿದ್ದು, ಮೈಸೂರಿನ ಚಾಮುಂಡೇಶ್ವರಿ, ಧರ್ಮಸ್ಥಳದ ಮಂಜುನಾಥಸ್ವಾಮಿ ಸೇರಿ ಹಲವು ದೇವಾಲಯಗಳಲ್ಲಿ ಕೆಲ ಸಮಯದವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರಲ್ಲ.

ಮಧ್ಯಾಹ್ನ 3:20ಕ್ಕೆ ಆರಂಭವಾಗಲಿರುವ ಈ ಗ್ರಹಣದ ಪ್ರಭಾವ ಸಂಜೆ 6:47ರವರೆಗೆ ಇರಲಿದ್ದು, ಸಂಜೆ 5:32ರ ಸುಮಾರಿಗೆ ಗ್ರಹಣದ ತೀವ್ರತೆ ಗರಿಷ್ಠ ಮಟ್ಟದಲ್ಲಿರಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಸುಮಾರು 25 ನಿಮಿಷಗಳ ಕಾಲ ಈ ಮನಮೋಹಕ ‘ಬ್ಲಡ್ ಮೂನ್’ ದೃಶ್ಯ ಗೋಚರಿಸಲಿದೆ ಎನ್ನಲಾಗಿದೆ.

ರಕ್ತ ಚಂದ್ರಗ್ರಹಣ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ  ದೇವಾಲಯದಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 8.30ವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರಲ್ಲ.  ತಲಕಾವೇರಿರಿಯಲ್ಲಿ  ಬೆಳಿಗ್ಗೆ 9 ಗಂಟೆಗೆ ಬಂದ್ ಆಗಲಿದ್ದು  ಸಂಜೆ 7.15 ದೇಗುಲ ತೆರೆಯಲಿದೆ.  ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 1.30ಕ್ಕೆ ರಿಂದ ಸಂಜೆ 7 ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಧರ್ಮಸ್ಥಳ ಮಂಜುನಾಥ ದೇಗುಲದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30ರವರೆಗೆ ದರ್ಶನಕ್ಕೆ ಅವಕಾಶ ಇರಲ್ಲ.

Key words: Blood Moon Eclipse, Today,  many temples