Monday, August 24, 2026

BDA Apartments

Home Cinema ಪೊಲೀಸ್ ಜೀಪ್ ಮೇಲೆ ಪಟಾಕಿ ಹಚ್ಚಿದ ವಿಜಯ್ ಫ್ಯಾನ್ಸ್ !

ಪೊಲೀಸ್ ಜೀಪ್ ಮೇಲೆ ಪಟಾಕಿ ಹಚ್ಚಿದ ವಿಜಯ್ ಫ್ಯಾನ್ಸ್ !

ಬೆಂಗಳೂರು, ಅಕ್ಟೋಬರ್ 25, 2019 (www.justkannada.in): ಇಳಯ ದಳಪತಿ ವಿಜಯ್ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ.

‘ಬಿಗಿಲ್’ ಚಿತ್ರ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯಿಸಿರುವ ‘ಬಿಗಿಲ್’ ಚಿತ್ರ ತಮಿಳುನಾಡಿನ ಹೊಸೂರಿನಲ್ಲಿ ಬಿಡುಗಡೆಯಾಗಬೇಕಿತ್ತು.

ಇಂದು ಬೆಳಿಗ್ಗೆ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಟಿಕೆಟ್ ಹಂಚಿಕೆ ಕೂಡ ಮಾಡಲಾಗಿತ್ತು. ಆದರೆ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಿಜಯ್ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಪೊಲೀಸ್ ಜೀಪ್ ಮೇಲೆ ಪಟಾಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.