ತಿ.ನರಸೀಪುರದಲ್ಲಿ  ಕ್ರೀಡಾಂಗಣ: ಅಭಿವೃದ್ಧಿ ಕಡೆಗೆ ದಿಟ್ಟ ಹೆಜ್ಜೆ

The State Government’s decision to allocate 5 acres out of the 13.5-acre land belonging to KSIC for the construction of a sports stadium is being seen as a significant step towards development. The project was earlier announced by the Chief Minister in the State Budget, and ₹6 crore has already been sanctioned. The proposal gained momentum following the remarkable achievements of Kho Kho player Chaithra, bringing attention to the need for better infrastructure to promote indigenous and rural sports.

 

ತಿ.ನರಸೀಪುರ, ಫೆ.೨೫,೨೦೨೬: ಪಟ್ಟಣದ KSICಗೆ ಸೇರಿದ 13.5 ಎಕರೆ ಜಾಗದಲ್ಲಿ 5 ಎಕರೆ ಪ್ರದೇಶವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಸರಕಾರ ಮಂಜೂರು ಮಾಡಿರುವುದು ಅಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಎಂದು ಹೇಳಬಹುದು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿಈ ಬಗ್ಗೆ  ಘೋಷಣೆ ಮಾಡಿದ್ದು, ಅದರಂತೆ ಕ್ರೀಡಾಂಗಣ ನಿರ್ಮಾಣಕ್ಕೆಂದು  6 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ.

ಸರಕಾರದ ಈ ಪ್ರಸ್ತಾಪಕ್ಕೆ ಸ್ಪೂರ್ತಿಯಾದದ್ದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ  ರಾಜ್ಯದ ಹೆಮ್ಮೆ, ಕೊಕ್ಕೊ ಆಟಗಾರ್ತಿ ಚೈತ್ರ, ( ತಿ.ನರಸೀಪುರ ತಾ.ಕುರುಬೂರು ಗ್ರಾಮ) ಅವರ ಸಾಧನೆ. ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದೆ.

ರೇಷ್ಮೆ ಘಟಕಕ್ಕೆ ಯಾವುದೇ ಹಾನಿ ಇಲ್ಲ :

ಕ್ರೀಡಾಂಗಣ ನಿರ್ಮಾಣದಿಂದ ರೇಷ್ಮೆ ನೂಲು ಘಟಕ ಮುಚ್ಚಲಿದೆ ಎಂಬ ಆರೋಪಗಳಿಗೆ ಯಾವುದೇ  ಆಧಾರವಿಲ್ಲ. ಈ ಬಗ್ಗೆ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜತೆಗೆ ರೇಷ್ಮೆ ನೂಲು ಘಟಕಕ್ಕೆ ಕಿಂಚಿತ್ತು ತೊಂದರೆ ಆಗದಂತೆ, ಹೆಚ್ಚುವರಿ ಪ್ರದೇಶದಲ್ಲಿ ಮಾತ್ರ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಕ್ರೀಡಾ ಇಲಾಖೆ ಸ್ಪಷ್ಪಪಡಿಸಿದೆ. ಮುಂದುವರಿದು, ಅನಗತ್ಯ ಮರಗಳ ಹನನ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

13.5 ಎಕರೆ ಜಾಗದಲ್ಲಿನ ಕೇವಲ 5 ಎಕರೆ ಮಾತ್ರ ಬಳಸಲಾಗುತ್ತಿದೆ; ಉಳಿದ ಜಾಗದಲ್ಲಿ KSIC ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಯುವಕರಿಗೆ ಹೊಸ ಅವಕಾಶ :

ಗ್ರಾಮೀಣ ಕ್ರೀಡೆಗಳಿಗೆ ಮೂಲಸೌಕರ್ಯ ಸಿಗಲಿದೆ. ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಿಗೆ ವೇದಿಕೆ ಸಿಗಲಿದೆ. ಸ್ಥಳೀಯ ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶಗಳೂ ಹೆಚ್ಚಾಗುವ ಸಾಧ್ಯತೆ ಇದೆ.

 ರಾಜಕೀಯಕ್ಕಿಂತ ಅಭಿವೃದ್ಧಿ ಮುಖ್ಯ :

ಕೆಲವರು ರಾಜಕೀಯವಾಗಿ ವಿಷಯವನ್ನು ಎತ್ತಿಕೊಂಡಿದ್ದರೂ, ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವುದಾಗಿ ಹೇಳಲಾಗುತ್ತಿದೆ. ಅಭಿವೃದ್ಧಿ ಯೋಜನೆಗಳನ್ನು ವಾಸ್ತವದ ಆಧಾರದ ಮೇಲೆ ನೋಡಬೇಕಾಗಿದೆ.

KSIC ರೇಷ್ಮೆ ಘಟಕ ಹಾಗೂ ಕ್ರೀಡಾಂಗಣ — ಎರಡೂ ಸಹ ಒಂದೇ ಜಾಗದಲ್ಲಿ ಸಮನ್ವಯವಾಗಿ ನಡೆಯಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.

ಒಟ್ಟಿನಲ್ಲಿ, ಇದು ನಗರದ ಕ್ರೀಡಾ ಭವಿಷ್ಯವನ್ನು ಬಲಪಡಿಸುವ, ಯುವಜನತೆಗೆ ಹೊಸ ದಾರಿ ತೆರೆದಿಡುವ ಯೋಜನೆ ಎನ್ನಬಹುದು.

key words: KSIC, sports stadium̧  T.Narasipura, Silk Unit, Kho Kho player

SUMMARY: 

Stadium at KSIC Land: A Strong Step Towards Development

The State Government’s decision to allocate 5 acres out of the 13.5-acre land belonging to KSIC for the construction of a sports stadium is being seen as a significant step towards development. The project was earlier announced by the Chief Minister in the State Budget, and ₹6 crore has already been sanctioned.

The proposal gained momentum following the remarkable achievements of Kho Kho player Chaithra, bringing attention to the need for better infrastructure to promote indigenous and rural sports.

🟢 No Threat to the Silk Unit

There has been no expert opinion or official statement suggesting that the silk yarn unit will be shut down due to the stadium construction.

The Sports Department has already clarified that there will be no unnecessary cutting of trees.

Out of the total 13.5 acres, only 5 acres are being utilized, while the remaining land will continue to support KSIC’s regular operations.


🟢 New Opportunities for Youth

The stadium will provide much-needed infrastructure for rural and traditional sports.

It can host state-level and national-level tournaments.

Local youth may benefit from improved training facilities and potential employment opportunities.

🟢 Development Over Politics

While some political opposition has emerged, observers believe attempts are being made to create misconceptions among the public. Development projects should be assessed based on facts rather than misinformation.

Overall, the project is viewed as a forward-looking initiative that can strengthen Mysuru’s sporting future while ensuring that KSIC’s silk operations continue without disruption.