Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Crime ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಮಂದಿ ಬಂಧನ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಮಂದಿ ಬಂಧನ

ಬಾಗಲಕೋಟೆ,ಫೆಬ್ರವರಿ,20,2026 (www.justkannada.in): ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ಚಪ್ಪಲಿ ತೂರಾಟ ನಡೆಸಿರುವ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ನಡೆದಿದ್ದು ಘಟನೆ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವಾಜಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ತನ್ವೀರ್, ಸದ್ದಾಮ್ ಲಾಕ್,  ಮುಜ್ಜು ಕಮತಗಿ, ಫಯಾಜ್ ಸರ್ಫಾರಾಜ್, ಚವುಸ್ ರಿಯಾನ್, ಅಯಾನ್ ಗುಳೇದಗುಡ್ಡ ಸೇರಿ 8 ಮಂದಿ ಬಂಧಿತರು ಬಂಧಿತರು.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಬಾಗಲಕೋಟೆ ಎಸ್ ಪಿ ಸಿದ್ದಾರ್ಥ್ ಗೋಯೆಲ್, ಘಟನೆ ಸಂಬಂಧ ಸುಮೋಟೋ ಕೇಸ್ ದಾಖಲಿಸಿಕೊಂಡು ಎಫ್ ಐಆರ್ ಮಾಡಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. ಕಲ್ಲು ತೂರಾಟ ನಡೆಸಿದ್ದ ನವನಗರ ನಿವಾಸಿ ತನ್ವೀರ್ ಬಂಧಿಸಲಾಗಿದೆ. ತನ್ವೀರ್ ಬಿಟ್ಟು ಬೇರೆ ಯಾರೂ ಕೂಡ ಕಲ್ಲು ತೂರಾಟ ನಡೆಸಿಲ್ಲ. ನಿನ್ನೆ ರಾತ್ರಿ 10.06 ಕ್ಕೆ ಕಲ್ಲು ತೂರಾಟ ನಡೆದಿದೆ ಮೆರವಣಿಗೆ ವೇಳೆ ಯಾವುದೇ ಕಲ್ಲು ತೂರಾಟ ನಡೆದಿಲ್ಲ.  ಕರ್ತವ್ಯಕ್ಕೆ ಅಡ್ಡಿಪಡಿಸಿದ  7 ಜನರ ಮೇಲೆ ಕೇಸ್ ಆಗಿದೆ.  ಡಿಜೆ ವಿಚಾರಕ್ಕಾಗಿ ಗಲಾಟೆ ಆಗಿಲ್ಲ ಕಲ್ಲು ತೂರಾಟದ ಜೊತೆ ಚಪ್ಪಲಿಯನ್ನು ಕೂಡ ಎಸೆಯಲಾಗಿದೆ. ಫೆ.24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕಲ್ಲು ತೂರಾಟ ವೇಳೆ ಮಾರ್ಕೆಟ್ ನಲ್ಲಿ ತರಕಾರಿ ಮಾರುವ ತಳ್ಳುವ ಗಾಡಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

Key words: Stone, pelting, Shivaji Jayanti, 8 arrested