Friday, August 21, 2026

BDA Apartments

Home Front Page ರೈತರ ಪರ ಧ್ವನಿ ಎತ್ತಿದ ರೈತ ಮುಖಂಡರಿಗೆ ಧಮ್ಕಿ ಹಾಕಿದ ವ್ಯಕ್ತಿ ವಿರುದ್ದ ದೂರು

ರೈತರ ಪರ ಧ್ವನಿ ಎತ್ತಿದ ರೈತ ಮುಖಂಡರಿಗೆ ಧಮ್ಕಿ ಹಾಕಿದ ವ್ಯಕ್ತಿ ವಿರುದ್ದ ದೂರು

ಮೈಸೂರು,ಫೆಬ್ರವರಿ,20,2026 (www.justkannda.in): ಬಂಡೀಪುರ ನಾಗರಹೊಳೆ ಸಫಾರಿ ಪುನರಾರಂಭಕ್ಕೆ  ವಿರೋಧ ವ್ಯಕ್ತಪಡಿಸಿ ರೈತರ ಪರ ಧ್ವನಿ ಎತ್ತಿದ ರೈತ ಮುಖಂಡ ಹೊನ್ನೂರು ಪ್ರಕಾಶ್ ಅವರಿಗೆ ಓಪನ್ ಚಾಲೇಂಜ್ ಹಾಕಿ ಧಮ್ಕಿ ಹಾಕಿದ್ದ ವ್ಯಕ್ತಿ ವಿರುದ್ದ ದೂರು ನೀಡಲಾಗಿದೆ.

ಬಂಡೀಪುರ ನಾಗರಹೊಳೆ ಸಫಾರಿ ಪುನರಾರಂಭಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ರೈತ ಸಂಘದ ಅದ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಹೋರಾಟ ಮಾಡಿದ್ದರು. ಸಫಾರಿ ರೀ ಓಪನ್ ಮಾಡಿದ್ದನ್ನು ಖಂಡಿಸಿ ಹೊನ್ನೂರು ಪ್ರಕಾಶ್ ನೇತೃತ್ವದ ತಂಡದಿಂದ ಬಂಡೀಪುರದ ಸಫಾರಿ ಕೇಂದ್ರಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಹೊನ್ನೂರು ಪ್ರಕಾಶ್ ಗೆ ವ್ಯಕ್ತಿಯೊಬ್ಬ  ಓಪನ್ ಆಗಿ ಧಮ್ಕಿ ಹಾಕಿದ್ದನು. ಹೊನ್ನೂರು ಪ್ರಕಾಶ್ ರೆಸಾರ್ಟ್ ಮಾಲೀಕರಿಗೆ ತೊಂದರೆ ಕೊಡುದು ಬಿಡಪ್ಪ ಕಾಡು ನಿನ್ನ ಓಬ್ನದ್ದೆ ಅಲ್ಲ ನಮ್ಮದು ಸಹ. ಹೆಡ್ ಡಿ ಕೋಟೆಗೆ ಬಾ ಇಲ್ಲ ಬಂಡೀಪುರಕ್ಕೆ ಬಾ ನಿನ್ನ ಫೇಸ್ ಮಾಡ್ತೀವಿ ಎಂದು ಓಪನ್ ಚಾಲೆಂಜ್ ಧಮ್ಕಿ ಹಾಕಿದ್ದನು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಇದೀಗ  ಧಮ್ಕಿ ಹಾಕಿದ ವ್ಯಕ್ತಿ ವಿರುದ್ದ ಗಡಿ ನಾಡ ರೈತರು ರೊಚ್ಚಿಗೆದ್ದಿದ್ದು ರಾಜ್ಯ ರೈತ ಸಂಘ ಕಾನೂನು ಹೋರಾಟಕ್ಕೆ ಮುಂದಾಗಿದೆ.

Key words: Complaint, threatened, farmer leaders, Safari