Sunday, August 23, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಜನ ನಗುತ್ತಿದ್ದಾರೆ- MLC ಹೆಚ್.ವಿಶ್ವನಾಥ್

ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಜನ ನಗುತ್ತಿದ್ದಾರೆ- MLC ಹೆಚ್.ವಿಶ್ವನಾಥ್

ಬೆಂಗಳೂರು,ಫೆಬ್ರವರಿ,17,2026 (www.justkannada.in): ಕಾಂಗ್ರೆಸ್ ಕೆಲವು ಶಾಸಕರಿಂದ ವಿದೇಶ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕರ್ನಾಟಕದ ರಾಜಕಾರಣ ಅಧೋಗತಿಗೆ ಹೋಗಿದೆ  ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ  ಆಡಳಿತ ನೋಡಿ ಜನ ನಗುತ್ತಿದ್ದಾರೆ. ಶಾಸಕರು ಯಾಕೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆದು ಗೊತ್ತಿದೆ.  ವಿದೇಶ ಪ್ರವಾಸ ಬಗ್ಗೆ ತಿಳಿದುಕೊಳ್ಳದಷ್ಟು ಜನರು ದಡ್ಡರಲ್ಲ. ರಾಜ್ಯದಲ್ಲಿ ಶೇ 90ರಷ್ಟು ಸಾಕ್ಷರತೆ ಕೊರತೆ ಇದೆ. ನಿವೇನು ಮಾಡುತ್ತಿದ್ದೀರಾ  ಎಂದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

Key words: People, laughing, CM Siddaramaiah, administration, MLC, H. Vishwanath