Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ನಾಯಕತ್ವ ಬದಲಾವಣೆ ವಿಚಾರ ಪದೇ ಪದೇ ಕೇಳಬೇಡಿ- ಸಿಎಂ ಸಿದ್ದರಾಮಯ್ಯ ಗರಂ

ನಾಯಕತ್ವ ಬದಲಾವಣೆ ವಿಚಾರ ಪದೇ ಪದೇ ಕೇಳಬೇಡಿ- ಸಿಎಂ ಸಿದ್ದರಾಮಯ್ಯ ಗರಂ

ಹಾವೇರಿ,ಫೆಬ್ರವರಿ,14,2026 (www.justkannada.in):  ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾಯಕತ್ವ ವಿಚಾರವಾಗಿ ಪದೇ ಪದೇ ಕೇಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರಮಕ್ಕೆ ತಕ್ಕ ಪ್ರತಿಫಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಹೈಕಮಾಂಡ್ ನವರು ಟ್ವೀಟ್ ಮಾಡಿದ್ದಾರಾ..?  ಹೈಕಮಾಂಡ್ ನವರು ಹೇಳಲಿ. ನಾಯಕತ್ವ ಬದಲಾವಣೆ ವಿಚಾರ, ನಾನು ಆ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದೇನೆ ಅಲ್ವಾ..? ಆದ್ರೂ ಯಾಕೆ ಕೇಳುತ್ತೀರಾ. ನಾಯಕತ್ವ ವಿಚಾರವಾಗಿ ಪದೇ ಪದೇ ಕೇಳಬೇಡಿ ಎಂದರು.

Key words: Don’t, ask, leadership change, CM Siddaramaiah