ಮಾ.5 ರಂದು ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದಿಂದ ಮುಷ್ಕರ-ಮಂಜುನಾಥ್ ಎಚ್ಚರಿಕೆ

ಮೈಸೂರು,ಫೆಬ್ರವರಿ,11,2026 (www.justkannada.in): ಬಾಕಿ ಹಣ ಬಿಡುಗಡೆ ಮಾಡದ ಸರ್ಕಾರದ ನಡೆ ಖಂಡಿಸಿ ಗುತ್ತಿಗೆದಾರರು ಮಾರ್ಚ್ 5 ರಂದು ರಾಜ್ಯ ಸರ್ಕಾರದ ವಿರುದ್ದ ಮುಷ್ಕರ ಹೂಡುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಂಜುನಾಥ್, ಸಿಎಂ ತವರು ಜಿಲ್ಲೆಯಿಂದಲೇ ಹೋರಾಟದ ಕಹಳೆ ಮೊಳಗಿಸುತ್ತೇವೆ.  37 ಸಾವಿರ ಕೋಟಿ ಬಾಕಿ ಹಣ ಕೂಡಲೇ ಬಿಡಗಡೆ ಮಾಡಬೇಕು ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ  ಮಾಡುತ್ತೇವೆ. ಮಾರ್ಚ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.

ಮುಷ್ಕರದಲ್ಲಿ ಸುಮಾರು 30 ಸಾವಿರ ಗುತ್ತಿಗೆದಾರರು ಭಾಗಿಯಾಗಲಿದ್ದಾರೆ.  ಮುಖ್ಯ ಕಾರ್ಯದರ್ಶಿ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗುತ್ತಿಲ್ಲ. ಕಳೆದ 2 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಒಂದು ಸಭೆಯನ್ನೂ ಮಾಡಿಲ್ಲ.  ಸರ್ಕಾರಲ್ಲಿ ಹಣ ಇಲ್ಲದಿದ್ದರಿಂದ ಗುತ್ತಿಗೆದಾರರಿಗೆ ಹಣ ನೀಡುತ್ತಿಲ್ಲ ಗುತ್ತಿಗೆದಾರರ ಮೇಲೆ ಸರ್ಕಾರಕ್ಕೆ ಯಾಕೆ ತಾತ್ಸಾರ ಗೊತ್ತಿಲ್ಲ . ನಮ್ಮ ಸರ್ಕಾರ ಬಂದ್ರೆ 1 ರೂ. ಕಮಿಷನ್ ತೆಗೆದುಕೊಳ್ಳಲ್ಲ ಅಂತಿದ್ದರು. ಈ ಹಿಂದೆ ಸಿದ್ದರಾಮಯ್ಯ ಭರವಸೆ ನೀಡಿದ್ದರು.  ಅದರೆ ಈಗ ಕೋರ್ಟ್ ಗೆ ಹೋಗಲಿ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ.  ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರೇ ಸಮಸ್ಯೆಗೆ ಶೇ 75ರಷ್ಟು ಪರಿಹಾರ ಸಿಗಲಿದೆ ಎಂದರು.

ನೀರಾವರಿ ಇಲಾಖೆಯಲ್ಲಿ ಸುಮಾರು 3500 ಕೋಟಿ ರೂ. ಬರಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಬಹಳಷ್ಟು ಮಂದಿ ಮಧ್ಯವರ್ತಿಗಳಿದ್ದಾರೆ.  ಸಿದ್ದರಾಮಯ್ಯ ಸರ್ಕಾರದಲ್ಲಿ ಇನ್ನೂ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ 40 % ಎಂದು ಹೇಳಿದ್ದು ತಪ್ಪಾಗಿದೆ ಅನ್ನಿಸುತ್ತಿದೆ. ಸಮಸ್ಯೆ ಬಗೆಹರಿಯದಿದ್ದರೆ ಮಾರ್ಚ್ 5 ರಿಂದ ಎಲ್ಲಾ ಕಾಮಗಾರಿ ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಮಂಜುನಾಥ್ ವಾರ್ನಿಂಗ್ ನೀಡಿದರು.

Key words: Contractors, Association, strike, against, government, Manjunath