ಹೊಸ ರೂಪದ ‘ಮೈಸೂರು ಸ್ಯಾಂಡಲ್ ಸೋಪ್’ ಬಿಡುಗಡೆ: ಪ್ರಚಾರ ರಾಯಭಾರಿಯಾಗಿ ನಟಿ ತಮನ್ನಾ

ಬೆಂಗಳೂರು,ಫೆಬ್ರವರಿ,11,2026 (www.justkannada.in):  ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್‌ಡಿಎಲ್‌ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಹೊಸ ಅಧ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಇದಕ್ಕೆ ವೇದಿಕೆಯಾಗಿದ್ದು ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನ ಝಗಮಗಿಸುವ ಸಭಾಂಗಣ.

ಹೌದು, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹಾಗೂ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಕೆಎಸ್‌ ಡಿಎಲ್‌, ಹೊಸ ಯುಗಕ್ಕೆ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಹಾಲುಬಣ್ಣದ ಬೆಡಗಿ ತಮನ್ನಾ ವಿಶೇವಾಗಿ ಸಿದ್ಧಪಡಿಸಿದ್ದ ವೇದಿಕೆ‌ ಮೇಲೆ ಬೆಳಕಿನ ಹೊನಲಿನಲ್ಲಿ ನಗೆ ಸೂಸುತ್ತ ಪ್ರತ್ಯಕ್ಷರಾದರು.  ಹೊಚ್ಚಹೊಸ ಪ್ಯಾಕ್‌ ನ ರೂಪ ತಾಳಿರುವ ಮೈಸೂರು ಸ್ಯಾಂಡಲ್‌ ಸೋಪ್‌ ಜತೆಗೆ ಸಂಸ್ಥೆಯ 57 ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಹೀಗೆ ನವನವೀನ ಪ್ಯಾಕಿಂಗ್‌ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್)‌ ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್‌ ಪೇಸ್ಟ್‌, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ. ಇದರೊಂದಿಗೆ ಕೆಎಸ್‌ಡಿಎಲ್‌ ನ ಮುಂದಿನ ಹಾದಿ ಅಲ್ಲಿ ತೆರೆದುಕೊಂಡಿತು. ಜೊತೆಯಲ್ಲೇ ತಮನ್ನಾ ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ ʻಸುಗಂಧ ಸಿರಿʼ ಮತ್ತು ʻಅರೋಮ್ಯಾಟಿಕ್‌ ಜರ್ನೀಸ್ʼ ಕಾಫಿ ಟೇಬಲ್‌ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.

ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದ ನಟಿ ತಮನ್ನಾ ಮಾತನಾಡಿ, ʻಮೈಸೂರು ಸ್ಯಾಂಡಲ್‌ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್‌ ಇಲ್ಲ. ಮೈಸೂರು ಸ್ಯಾಂಡಲ್‌ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ,ʼ ಎಂದು ಬಣ್ಣಿಸಿದರು.

ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ʻಕೆಎಸ್‌ಡಿಎಲ್‌ ಕೇವಲ ಸ್ಯಾಂಡಲ್‌ ಸೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್‌ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್‌ ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್‌ ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆʼ ಎಂದರು.

ಜತೆಗೆ, ಕೆಎಸ್‌ ಡಿಎಲ್‌ ಉತ್ಪನ್ನಗಳ ಪೈಕಿ ಸದ್ಯಕ್ಕೆ ಶೇಕಡ 1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್‌ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆ ಎಂದು ಅವರು ನುಡಿದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಸಿ ಎಸ್‌ ಅಪ್ಪಾಜಿ ನಾಡಗೌಡ ಮಾತನಾಡಿ, ʻಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದ್ದು, ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ 3 ಕೋಟಿ ಫಾಲೋಯರ್ಸ್‌ ಹೊಂದಿರುವ, ಅಖಿಲ ಭಾರತ ಮಟ್ಟದ ವರ್ಚಸ್ಸಿರುವ ತಮನ್ನಾ ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆʼ ಎಂದಿದ್ದಾರೆ.

ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಎಂ. ಪ್ರಶಾಂತ್‌ ಪ್ರಾಸ್ತಾವಿಕವಾಗಿ‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್‌, ಶಿವಕುಮಾರ್‌, ಪ್ರತಿಮಾ ವಂದಗಾರು, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ, ಸ್ವತಂತ್ರ ನಿರ್ದೇಶಕ ಶಾಮರಾಜು ಮುಂತಾದವರು ಉಪಸ್ಥಿತರಿದ್ದರು.

ENGLISH SUMMARY..

KSDLTurns a New Leaf with Tamannaah as Brand Face

Mysuru Sandal Soap and several other products get a contemporary makeover

Tamannaah unveils 57 products

Bengaluru: Clad in an elegant red Mysuru silk saree—an enduring symbol of Karnataka and a perennial favourite among women—celebrated actress Tamannaah Bhatia made a poised and striking appearance on stage, instantly drawing the attention of the audience with her radiant smile. The moment held special significance as it was centred around the State’s iconic brand, Mysuru Sandal Soap. With this appearance, Tamannaah formally took on her role as brand ambassador of Karnataka Soaps and Detergents Limited (KSDL), an organisation with a legacy of more than a century. The event was held at a glittering hall of a private hotel.

Marking a phase of renewed momentum under the leadership of Minister for Large and Medium Industries M.B. Patil and KSDL Chairman C.S. Appaji Nadagouda, KSDL has embarked on a journey of transformation and expansion. Symbolising this shift, Tamannaah appeared on a specially designed stage, illuminated by bright lights and exuding grace and confidence.

As part of the occasion, Tamannaah unveiled 57 products of the organisation, including Mysuru Sandal Soap, which has now been introduced in a refreshed and contemporary packaging.

The products that have received innovative packaging include sandalwood oil, jasmine-scented soaps, perfumes, toothpaste, coconut oil, petroleum jelly and organic products, taking the total product portfolio to nearly 60 offerings. With this launch, KSDL’s future roadmap was clearly outlined. Several advertisements featuring Tamannaah were also released on the occasion. Additionally, two coffee table books chronicling the organisation’s rich legacy—Sugandha Siri and Aromatic Journeys—were unveiled.

Speaking on the occasion, Tamannaah said, “Mysuru Sandal Soap is not just a soap. It is deeply associated with emotions, childhood memories and nostalgia. It represents a perfect blend of purity and authenticity. Mysuru Sandal Soap holds a special place in people’s hearts, and I consider it a privilege to be associated with this institution as its brand ambassador.”

Addressing the gathering, Minister M.B. Patil said, “KSDL is no longer confined to Sandal Soap alone. We are now manufacturing luxury jasmine-scented soaps as well. Jasmine oil costs over ₹4 lakh per litre, while the jasmine fragrance soap has been priced at ₹400. There is significant demand for such jasmine based products in the European market. Similarly, we have entered the perfumery segment. Senior officials of the organisation have visited Coimbatore and Kannauj and entered into necessary agreements to strengthen this initiative.”

He further noted that currently only about one per cent of KSDL’s products are exported, and a detailed roadmap has been prepared to substantially increase exports.

KSDL Chairman C.S. Appaji Nadagouda said the organisation’s turnover is expected to touch ₹2,000 crore this year, with profits crossing ₹500 crore. To achieve this growth, modern marketing strategies have been adopted. The appointment of Tamannaah—who enjoys nationwide appeal and a social media following of nearly 30 million—as brand ambassador is a key component of this strategy, he said.

KSDL Managing Director K.P.M. Prashanth delivered the introductory address.

Principal Secretary, Department of Industries, Selvakumar; Independent Director Aravind Galagali; Technical Advisor Rajanikant; Shivakumar; Pratima Vandagaru; MSIL Managing Director Manoj; Independent Director Shamaraju and others were present at the programme.

Key words: New look, Mysore Sandal Soap, Actress, Tamannaah,  KSDL