ಬೆಂಗಳೂರು,ಫೆಬ್ರವರಿ,9,2026 (www.justkannada.in): ಮೆಟ್ರೋ ದರ ಏರಿಕೆ, ತಾತ್ಕಾಲಿಕ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಗರು ಡ್ರಾಮಾ ಮಾಡುತ್ತಾರೆ. ಅವರು ರಾಜಕಾರಣ ಬಿಟ್ಟು ಡ್ರಾಮಾ ಕಂಪನಿ ಮಾಡಿದ್ರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕೇಂದ್ರ ಸರ್ಕಾರದ ಅಧೀನದಲ್ಲಿ ಮೆಟ್ರೋ ಬರುತ್ತೆ. ಕೇಂದ್ರದ ನಗರಾಭಿವೃದ್ದಿ ಕಾರ್ಯದರ್ಶಿ ಮುಖ್ಯಸ್ಥರಾಗಿರುತ್ತಾರೆ. ಕಮಿಟಿಯಲ್ಲಿ ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದದ ಅಧಿಕಾರಿಗಳು ಇರುತ್ತಾರೆ. ಅವರು ಶಿಫಾರಸ್ಸು ಮಾಡಿದ ಮೇಲೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂದರು.
ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಾರೆ. ಮೂರು ಲಕ್ಷ ಕೋಟಿ ರೂ ಬೆಂಗಳೂರಿನಿಂದ ಕೇಂದ್ರಕ್ಕೆ ಹೋಗುತ್ತದೆ. ಬಿಜೆಪಿಯವರು ಹುಟ್ಟು ಸುಳ್ಳುಗಾರರು ಡ್ರಾಮಾ ಮಾಸ್ಟರ್ ಗಳು ಎಲ್ಲಾ ನಿರ್ಧಾರ ಕೇಂದ್ರ ಸರ್ಕಾರದ ಕೈಯಲ್ಲಿದೆ. ಬಿಜೆಪಿ ಸಂಸದರು ಕೇಂದ್ರ ಮಾಡಿದ್ದೇ ಸರಿ ಅಂತಾ ಹೇಳುತ್ತಾರೆ. ಒಳ್ಳೆಯ ಕೆಲಸ ಆದ್ರೆ ಮೋದಿ ಮಾಡಿದ್ದಾರೆ ಅಂತಾ ಹೇಳುತ್ತಾರೆ. ಇಲ್ಲಿದ್ದರೆ ಸಿದ್ದರಾಮಯ್ಯ ಮಾಡಿದ್ದು ಅಂತಾರೆ. ಕೇಂದ್ರ ಸರ್ಕಾರ 2 ಲಕ್ ಕೋಟಿ ರೂಪಾಯಿ ಸಾಲ ಮಾಡಿದೆ. ಅಂಕಿ ಆಂಶ ನೋಡಿ ಯಾರ ಖಜಾನೆ ಖಾಲಿಯಾಗಿದೆ ಗೊತ್ತಾಗುತ್ತೆ. ಅದರೆ ಬಿಜೆಪಿಯವರು ದೊಡ್ಡ ಡ್ರಾಮಾ ಮಾಡುತ್ತಾರೆ. ಬಿಜೆಪಿಗರು ರಾಜಕಾರಣ ಬಿಟ್ಟು ಡ್ರಾಮಾ ಕಂಪನಿ ಮಾಡಿದ್ರೆ ಒಳ್ಳೆಯದು ಎಂದು ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.
Key words: BJP, politics, drama company, Minister, Ramalingareddy







