Sunday, September 27, 2026

BDA Apartments

ಮೋದಿ ಮುಂದೆ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ- ಡಿ.ಕೆ ಸುರೇಶ್ ಕಿಡಿ ...
Home Front Page ಮೋದಿ ಮುಂದೆ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ- ಡಿ.ಕೆ ಸುರೇಶ್ ಕಿಡಿ

ಮೋದಿ ಮುಂದೆ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ- ಡಿ.ಕೆ ಸುರೇಶ್ ಕಿಡಿ

ಬೆಂಗಳೂರು,ಫೆಬ್ರವರಿ,9,2026 (www.justkannada.in):  ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಖಾಲಿಡಬ್ಬ ಹಿಡಿದು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ದ ಮಾಜಿ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಂಸದ ಡಿ.ಕೆ ಸುರೇಶ್, ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಯಾಕೆ ಹಿಡಿದುಕೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಬೆಂಗಳೂರು ಕನ್ನಡಿಗರಿಗೆ ಖಾಳಿ ಡಬ್ಬ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತೇಜಸ್ವಿ ಸೂರ್ಯ ಅವರ ಬದ್ದತೆ ದೆಹಲಿಯಲ್ಲಿ ಪ್ರದರ್ಶನ ಮಾಡಲಿ. ಪ್ರಧಾನಿ ಮೋದಿ ಮುಂದೆ  ತೇಜಸ್ವಿ ಸೂರ್ಯ ಎದೆಗಾರಿಕೆ ತೋರಿಸಲಿ ಎಂದು ಡಿಕೆ ಸುರೇಶ್  ಸವಾಲು ಹಾಕಿದರು.

Key words: MP, Tejaswi Surya, Protest, D.K. Suresh