Thursday, September 10, 2026

BDA Apartments

Home Front Page ಅನರ್ಹ ಶಾಸಕರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ-ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ…

ಅನರ್ಹ ಶಾಸಕರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ-ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ…

ಬೆಳಗಾವಿ,ಅ,23,2019(www.justkannada.in): ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ಬೆಳಗಾವಿಯಲ್ಲಿ ಇಂದು ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಅವರ ಬಗ್ಗೆ ನಾವ್ಯಾಕೆ ಚಿಂತನೆ ಮಾಡಬೇಕು, ಅನರ್ಹ ಶಾಸಕರ ಬಗ್ಗೆ ನಾವು ಚಿಂತನೆ ಮಾಡುವ ಅವಶ್ಯಕತೆ ಇಲ್ಲ. ಅನರ್ಹರು ನಮ್ಮ ಪಕ್ಷಕ್ಕೆ ಬರುವ ಕುರಿತು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.

ಸ್ಪೀಕರ್ ಅನರ್ಹಗೊಳಿಸಿದ್ದಕ್ಕೆ  ಅನರ್ಹ ಶಾಸಕರು ಸುಪ್ರೀಂಕೋರ್ಟ್  ಗೆ ಹೋಗಿದ್ದಾರೆ.  ಅನರ್ಹರು ತಮಗೆ ನ್ಯಾಯಬೇಕೆಂದು, ಕಾಂಗ್ರೆಸ್ ನವರು ತಮಗೆ ನ್ಯಾಯಬೇಕೆಂದು ಕೋರ್ಟ್ ಗೆ ಹೋಗಿದ್ದಾರೆ. ಇದು ಅವರ ಮಧ್ಯದ ವ್ಯಾಜ್ಯ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.  ಇದಕ್ಕೆ ನಾವ್ಯಾಕೆ ಉತ್ತರಿಸಬೇಕು. ಈ ಕ್ಷಣದವರೆಗೂ ಅನರ್ಹ ಶಾಸಕರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.

Key words: disqualified MLA-No relation-  BJP-DCM- Laxman Savadi