ಬೆಂಗಳೂರು,ಡಿಸೆಂಬರ್,29,2025 (www.justkannada.in): ಬೆಂಗಳೂರಿನ ಕೋಗಿಲು ಲೇ ಔಟ್ ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ನಮ್ಮ ಸರ್ಕಾರ ಯಾರ ಲಾಬಿಗೂ ಮಣಿಯುವುದಿಲ್ಲ. ಕಸ ವಿಲೇವಾರಿಗೆ ಮೀಸಲಿಟ್ಟ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದರು. ಬಡವರು ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದರು. ಅವರನ್ನು ಒಕ್ಕಲೆಬ್ಬಿಸಿಲ್ಲ. ಅವರಿಗೆ ಪುನರ್ ವಸತಿ ಕಲ್ಪಿಸಿವುದು ನಮ್ಮ ಜವಾಬ್ದಾರಿ. ಯಾರು ಬೇಕಾದರೂ ಯಾವುದೇ ಪ್ರದೇಶದ ಬಗ್ಗೆ ಮಾತನಾಡುವ ಹಕ್ಕು ಅಧಿಕಾರ ಎಲ್ಲರಿಗೂ ಇದೆ. ಈ ವಿಚಾರದಲ್ಲಿ ಕೆ.ಸಿ ವೇಣುಗೋಪಾಲ್ ಹೇಳಿರುವುದು ಸರಿ ಇದೆ. ಕೇರಳ ಸಿಎಂ ಪಿಣರಾಯಿ ಹೇಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ವಸತಿ ನೀಡಬೇಕಾಗಿರುವ ಸರ್ಕಾರ ಆದ್ಯತೆ ಕೆಲಸ. ಇದರಲ್ಲಿ ಯಾರ ಓಲೈಕೆ ಬರಲ್ಲ . ಈ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಹೆದರಿಕೆ ಇಲ್ಲ. ಯಾರ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯಲ್ಲ. ಕೇರಳದಲ್ಲಿ ಪ್ರವಾಹ ಆದಾಗ ನಾವು ಅಲ್ಲಿ ವಸತಿ ಕಲ್ಪಿಸಿಲ್ವಾ? ಅತಿಕ್ರಮ ಪ್ರವೇಶ ಮಾಡಿದವರಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.
Key words: Kerala CM, Pinarayi Vijayan, Minister, H.C. Mahadevappa







