ಮೈಸೂರು,ಡಿಸೆಂಬರ್,27,2025 (www.justkannada.in): ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಎನ್ ಐಎಗೆ ವರದಿ ಸಲ್ಲಿಸಲಿದ್ದಾರೆ.
ಸಲೀಂ ನವೆಂಬರ್ ನಲ್ಲಿ ಅಜ್ಮೀರ್ ದರ್ಗಾದಲ್ಲಿ ಬಲೂನ್ ಮಾರಾಟ ಮಾಡಿದ್ದು ನಂತರ ಉತ್ತರಪ್ರದೇಶ, ಹೈದರಾಬಾದ್ ನಲ್ಲಿ ಬಲೂನ್ ಮಾರಾಟ ಮಾಡಿದ್ದನು. ಬಲೂನ್ ಮಾರಾಟ ಮಾಡೋದೇ ಸಲೀಂ ಕುಟುಂಬದ ಕಾಯಕವಾಗಿತ್ತು ಎನ್ನಲಾಗಿದೆ. ಸಲೀಂ ಜೊತೆ ಬಂದಿದ್ದ ಸ್ನೇಹಿತರಿಂದ ರಿಜ್ವಾನ್ ಅಲಿಯಾಸ್ ರಾಜು ಹಾಗೂ ಹುಸೇನ್ ಅಲಿಯಾಸ್ ಸಿಂಗ್, ಸುನೀಲ್ ಸಿಂಗ್ ರಿಂದ ಸಂಪೂರ್ಣ ಮೈಸೂರು ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು ಎನ್ ಐಎಗೆ ವರದಿ ಸಲ್ಲಿಸಲಿದ್ದಾರೆ.
ಸಲೀಂ ಹಾಗೂ ಕುಟುಂಬಸ್ಥರು ಹತ್ತು ವರ್ಷದಿಂದ ಬರುತ್ತಿದ್ದರು- ಲಾಡ್ಜ್ ಮಾಲೀಕ
ಘಟನೆ ಕುರಿತು ಮಾತನಾಡಿರುವ ಷರೀಫ್ ಲಾಡ್ಜ್ ಮಾಲೀಕ ಅಮಾನ್ , ಸಲೀಂ ಹಾಗೂ ಅವರ ಸಂಬಂಧಿಕರು ಹತ್ತು ವರ್ಷದಿಂದ ಬರುತ್ತಿದ್ದರು. ದಸರಾ ಸೇರಿ ಹಬ್ಬ ಹರಿದಿನಗಳಲ್ಲಿ ಬರುತ್ತಿದ್ದರು. ಸೀಸನ್ ನಲ್ಲಿ ಅವರು ಉತ್ತರ ಪ್ರದೇಶದಿಂದ ಬರುತ್ತಿದ್ದರು. ಯಾವುದಾದರೂ ದೊಡ್ಡ ಈವೆಂಟ್ ಇರುವಾಗ ಕರೆಸಿಕೊಳ್ಳುತ್ತಿದ್ದರು. ಒಬ್ಬರಿಗೆ ಒಂದು ದಿನಕ್ಕೆ ನೂರು ರೂಪಾಯಿ ಚಾರ್ಜ್ ಮಾಡಿತ್ತಿದ್ದೆವು. ಒಮ್ಮೊಮ್ಮೆ ಒಂದು ಕೊಠಡಿಯನ್ನೇ ನೂರು ರೂ.ಗೆ ಕೊಡುತ್ತಿದ್ದೆವು. ಒಂದೇ ಕೊಠಡಿಯಲ್ಲಿ ನಾಲ್ವರು ಉಳಿದುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಎರಡು ಕೊಠಡಿಯಲ್ಲಿ ನಾಲ್ವರು ಇರುತ್ತಿದ್ದರು. ವ್ಯಾಪಾರವಾದರೆ ಆ ಹಣವನ್ನ ಕೊಡುತ್ತಿದ್ದರು. ಇಲ್ಲವಾದರೆ ಅದನ್ನೂ ಅವರು ಕೊಡುತ್ತಿರಲಿಲ್ಲ. ನಾವು ಸೇವೆಗಾಗಿ ಅಂತ ಈ ಕೊಠಡಿ ನೀಡುತ್ತಿದ್ದೆವು. ಆಧಾರ್ ಕಾರ್ಡ್ ತೆಗೆದುಕೊಂಡು ಅವರಿಗೆ ಕೊಠಡಿ ಕೊಡುತ್ತಿದ್ದವು. ಒರಿಜಿನಲ್ ಡಾಕ್ಯುಮೆಂಟ್ ಪಡೆದು ಕೊಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ಸಲೀಂ ಮತ್ತು ಅವರ ಸ್ನೇಹಿತರು ವ್ಯಾಪಾರವಾದರೆ ಹತ್ತು- ಹದಿನೈದು ದಿನ ಇರುತ್ತಿದ್ದರು. ಇಲ್ಲದಿದ್ದರೆ ಮೂರು- ನಾಲ್ಕು ದಿನಕ್ಕೆ ತೆರಳುತ್ತಿದ್ದರು. ಸೈಕಲ್ ಹೊಡೆದುಕೊಂಡೇ ಹೈದರಾಬಾದ್ ಗೂ ತೆರಳುತ್ತಿದ್ದರು. ದಾರಿಯುದ್ದಕ್ಕೂ ಹಳ್ಳಿಗಳಿಗೆ ಸೈಕಲ್ ಹೊಡೆದುಕೊಂಡೇ ಹೋಗುತ್ತಿದ್ದರು. ಸೈಕಲ್ ಎಲ್ಲಿಂದ ತರುತ್ತಿದ್ದರು ಗೊತ್ತಿಲ್ಲ. ಸೈಕಲ್ ಇಲ್ಲೇ ಇರುತ್ತಿದ್ದವು. ಅದು ಸ್ಕೂಟರ್ ಆದರೆ ನಂಬರ್ ಹೇಳಬಹುದಿತ್ತು. ಬಲೂನ್ ಮಾರಿದ ಮೇಲೆ ಸೈಕಲ್ ಬಿಟ್ಟು ಹೋಗುವುದು, ಬರುವುದು ಮಾಡುತ್ತಿದ್ದರು. ಸಿಲಿಂಡರ್ ಗಳನ್ನ ಶೆಡ್ ಗಳಲ್ಲಿ ಬಾಡಿಗೆಗೆ ಇಟ್ಟು ಬರುತ್ತಿದ್ದರು. ಯಾವತ್ತೂ ಲಾಡ್ಜ್ ಬಳಿಗೆ ಅವರು ತರುತ್ತಿರಲಿಲ್ಲ ಎಂದು ಲಾಡ್ಜ್ ಮಾಲೀಕ ತಿಳಿಸಿದ್ದಾರೆ.
ಪಾಪಾ, ಅವರೆಲ್ಲ ಒಳ್ಳೆಯ ಜನರು. ಮಗನ ಮದುವೆ ಮೊನ್ನೆ ಆಗಿದೆ. ರಾಯಲ್ ಅಲ್ಲಿ ನಡೆದ ಮದುವೆಗೆ ಕಮೀಷನರ್ ಬರಬೇಕಿತ್ತು. ಈ ಘಟನೆ ಆಗಿದ್ದಕ್ಕೆ ಯಾರೂ ಬರಲಿಲ್ಲ. ಕೋವಿಡ್ ವೇಳೆ ಕೊಠಡಿಗಳನ್ನ ಫ್ರೀ ಕೊಟ್ಟಿದ್ದೆವು. ಸಲೀಂ ಅವರ ಮುಖ ಪರಿಚಯ ಇತ್ತು. ಇವರೆಲ್ಲ ಲಾಡ್ಜ್ ಗೆ ಹಳೇ ಗಿರಾಕಿಗಳು. ಸಲೀಂ ಜೊತೆ ಬಂದಿದ್ದವರೆಲ್ಲ ಒಂದೇ ಕುಟುಂಬಸ್ಥರು ರಾಜೀವ್, ಸುನೀಲ್ ಕುಮಾರ್, ನಾಲ್ಕು ಜನರೂ ಕೂಡ ಮುಸ್ಲಿಂರು. ರಾಜು ಅಂತಲೂ ಸುನೀಲ್ ಅವರಿಗೆ ಕರೆಯುತ್ತಿದ್ದರು. ಸಿಂಗ್ ಅಂತ ಒಬ್ಬರು ಇರಿತ್ತಿದ್ದರು. ಷರೀಫ್ ಲಾಡ್ಜ್ ಮಾಲೀಕ ಅಮಾನ್ ಮಾಹಿತಿ ನೀಡಿದ್ದಾರೆ.
ಕಟ್ಟೆಚ್ಚರ, ಎಲ್ಲಾ ಲಾಡ್ಜ್ ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಅರಮನೆ ಮುಂಭಾಗ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ ಬೆನ್ನಲ್ಲೆ ಮೈಸೂರಿನ ಎಲ್ಲಾ ಲಾಡ್ಜ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹೊರಗಡೆಯಿಂದ ಬಂದಿರುವ ವ್ಯಕ್ತಿಗಳ ಮಾಹಿತಿ ಪಡೆದು ರೂಮ್ ಕೊಡುವಂತೆ ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಆಧಾರ್ ಕಾರ್ಡ್ ಗುರುತು ಚೀಟಿ ಇಲ್ಲದೆ ರೂಮ್ ಕೊಡುವ ಲಾಡ್ಜ್ ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಲಾಡ್ಜ್ ಗಳಲ್ಲಿ ಅಕ್ರಮವಾಗಿ ಉಳಿದುಕೊಂಡಿರುವವರ ಮೇಲೆ ನಿಗಾ ಇಟ್ಟಿದ್ದಾರೆ. ಹೊಸ ವರ್ಷ ಬರುತ್ತಿರುವ ಹಿನ್ನಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಬಳಿಕ ಮೈಸೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
Key words: High alert, Mysore, Police, cylinder, explosion, tragedy







