ಮೈಸೂರು,ಡಿಸೆಂಬರ್,27,2025 (www.justkannada.in): ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ದುರಂತದಲ್ಲಿ ಗಂಭೀರ ಗಾಯಗೊಂಡು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ನಿನ್ನೆ ಸಾವನ್ನಪ್ಪಿದ್ದು ಇದೀಗ ತಂಗಿನ ಸಾವಿನ ಸುದ್ದಿ ತಿಳಿದು ಅಣ್ಣನೂ ಸಹ ಮೃತಪಟ್ಟಿದ್ದಾರೆ.
ತಂಗಿ ಮಂಜುಳ ಸಾವಿನ ಸುದ್ದಿ ಕೇಳಿ ಅಣ್ಣ ಪರಮೇಶ್ವರ್ (60) ಸಾವನ್ನಪ್ಪಿದ್ದಾರೆ. ಇವರು ನಂಜನಗೂಡಿನ ಚಾಮಲಾಪುರದ ನಿವಾಸಿಗಳಾಗಿದ್ದಾರೆ. ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸಿಲಿಂಡರ್ ಬ್ಲಾಸ್ಟ್ ದುರಂತದಲ್ಲಿ ಮಹಿಳೆ ಮಂಜಳ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಮಂಜುಳ ಅಣ್ಣ ಪರಮೇಶ್ವರ್ ಇದೀಗ ತಂಗಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತಪಟ್ಟಿದ್ದಾರೆ.
Key words: Mysore Helium gas, blast, case, Brother, dies, sister, death







