ಚಿಕ್ಕಮಗಳೂರು,ನವೆಂಬರ್,26,2025 (www.justkannada.in): ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ತೀವ್ರವಾಗಿದ್ದು ಈ ಕುರಿತು ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಅಧಿಕಾರ ಸಂಘರ್ಷ ಆಗಬಾರದು. ತೀರ್ಮಾನ ಆಗುವುದಿದ್ದರೇ ಹೈಕಮಾಂಡ್ ಮಟ್ಟದಲ್ಲೇ ತೀರ್ಮಾನ ಆಗಲಿ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ರಾಹುಲ್ ಗಾಂಧಿ ಅವರ ಬಳಿ ರಾಜ್ಯದ ವಿಷಯವನ್ನು ಚರ್ಚಿಸಲ್ಲ ತೀರ್ಮಾನ ಆಗಬೇಕಾದರೆ ಹೈಕಮಾಂಡ್ ಮಟ್ಟದಲ್ಲಿಆಗಲಿ. ಅಧಿಕಾರ ಸಂಘರ್ಷ ಆಗಬಾರದು ಹೈಕಮಾಡ್ ತಿರ್ಮಾನ ಮಾಡುತ್ತದೆ ಎಂದರು. bike hಇತ್ಈಚಿನ ಬೆಳವಣಿಗೆಯಿಂದ ಪಕ್ಷಕ್ಕೆ ಹಾನಿಯಾಗಲಿ
ನನಗೆ ಅಧಿಕಾರ ದೊಡ್ಡದಲ್ಲ. ಸಿದ್ದಾಂತ ದೊಡ್ಡದು. ಇತ್ತೀಚಿನ ಬೆಳವಣಿಗೆ ಪಕ್ಷಕ್ಕೆ ಹಾನಿಯಾಗುತ್ತಿದೆ. ದೊಡ್ಡವರು ಯೋಚಿಸಿ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
Key words: no power, struggle, Decisions, high command, level, B.K. Hariprasad







