Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಆಚರಣೆ ಕೈ ಬಿಡುವುದಿಲ್ಲ- ಸಚಿವ ಶ್ರೀರಾಮುಲು ಹೇಳಿಕೆ…

ಯಾವುದೇ ಕಾರಣಕ್ಕೂ ಹಂಪಿ ಉತ್ಸವ ಆಚರಣೆ ಕೈ ಬಿಡುವುದಿಲ್ಲ- ಸಚಿವ ಶ್ರೀರಾಮುಲು ಹೇಳಿಕೆ…

ಬಳ್ಳಾರಿ, ಅ,16,2019(www.justkannada.in):  ಯಾವುದೇ ಕಾರಣಕ್ಕೂ ಈ ಬಾರಿ ಹಂಪಿ ಉತ್ಸವ ಆಚರಣೆಯನ್ನ ಕೈ ಬಿಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಬಳ್ಳಾರಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಶ್ರೀರಾಮುಲು,   ಈ ಬಾರಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ ಅಪಾರ ನಷ್ಟ ಉಂಟಾಗಿದೆ. ಹೀಗಾಗಿ  ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಡಿ.5 ರಂದು ಉಪಚುನಾವಣೆ ಹಿನ್ನೆಲೆ,  ಟಿಕೆಟ್ ಗಾಗಿ ಹೆಚ್.ಆರ್ ಗವಿಯಪ್ಪ ಬಂಡಾಯ ಕುರಿತು ಪ್ರತಿಕ್ರಿಯಿಸಿದ  ಸಚಿವ ಶ್ರೀರಾಮುಲು, ಹೆಚ್.ಆರ್ ಗವಿಯಪ್ಪ ನಮ್ಮ ಸ್ನೇಹಿತರು, ನಮ್ಮ ಮುಖಂಡ. ಅವರನ್ನ ಮನವೊಲಿಸುವ ಕೆಲಸ ಮಾಡುತ್ತೇವೆ. ಅವರಿಗೆ ನೀಡಿರುವ ಸ್ಥಾನ ಪಡೆದುಕೊಳ್ಳುವಂತೆ ತಿಳಿಸುತ್ತೇವೆ. ಬಂಡಾಯವನ್ನ ಶಮನ ಮಾಡಲು ಯತ್ನಿಸುತ್ತೇವೆ ಎಂದು  ತಿಳಿಸಿದರು.

Key words: ballari-minister- shriramulu-hampi- utsava