ಮೈಸೂರು,ಸೆಪ್ಟಂಬರ್,5,2025 (www.justkannada.in): ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ “ವಿಕ್ರಂ” ಎಂಬ ಹೆಸರಿನ ಗಂಡು ಜಾಗ್ವಾರ್ ಇಂದು ಬೆಳಗ್ಗೆ ಸಾವನ್ನಪ್ಪಿದೆ.
ಸುಮಾರು 7.7 ವರ್ಷ ವಯಸ್ಸಿನ “ವಿಕ್ರಂ” ಜಾಗ್ವಾರ್ ಇಂದು ಬೆಳಗ್ಗೆ ಸುಮಾರು 9:00 ಗಂಟೆಗೆ ತೀವ್ರ ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿದ್ದು ಮೈಸೂರು ಮೃಗಾಲಯವು ಸಂತಾಪ ವ್ಯಕ್ತಪಡಿಸಿದೆ.
ಜಾಗ್ವಾರ್ ಪ್ರಾಣಿಯು ಕಳೆದ ಎರಡು ದಿನಗಳಿಂದ ಊಟವನ್ನು ವಿಸರ್ಜಿಸಿದ ಕಾರಣ ಚಿಕಿತ್ಸೆಗೊಳಪಡಿಸಲಾಗಿತ್ತು. ಜಾಗ್ವಾರ್ ಪ್ರಾಣಿಯು ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇದರ ಸಾವು ಮೃಗಾಲಯಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ ಎಂದು ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ಸಂತಾಪ ಸೂಚಿಸಿದೆ.
Key words: Vikram, Jaguar, death, Mysore Zoo