ಮುಂಬೈ,ಆಗಸ್ಟ್,9,2025 (www.justkannada.in): ಸಿನಿಮಾ ಮಾಡುವುದಾಗಿ ಹೇಳಿ ಸುಮಾರು 3 ಕೋಟಿ ರೂ ವಂಚನೆ ಮಾಡಿದ ಆರೋಪದ ಮೇಲೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ದ ಮುಂಬೈನ ಅಂಬೋಲಿ ಪೊಲೀಸರಿಂದ ಎಫ್ ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿನಿಮಾ ನಿರ್ದೇಶಕ ರಾಘವೇಂದ್ರ ಹೆಗ್ಡೆ ಎಂಬುವವರು ನಟ ಧ್ರುವ ಸರ್ಜಾ ವಿರುದ್ದ ವಂಚನೆ ಆರೋಪ ಮಾಡಿ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಟ ಧ್ರುವ ಸರ್ಜಾ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.ನಟ ಧ್ರುವ ಸರ್ಜಾ ಅವರು ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರಿಂದ 3.15 ಕೋಟಿ ರೂ. ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.
ಹೊಸ ಸಿನಿಮಾದ ಶೂಟಿಂಗ್ ಗೆ ಬರುವುದಾಗಿ 3.15 ಕೋಟಿ ಅಡ್ವಾನ್ಸ್ ಹಣ ಪಡೆದು ಶೂಟಿಂಗ್ ಗೆ ಬರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಘವೇಂದ್ರ ಜೊತೆ ಸಿನಿಮಾ ಮಾಡುವುದಾಗಿ ನಟ ಧ್ರುವಸರ್ಜಾ ಹೇಳಿದ್ದರಂತೆ ಹಣ ಪಡೆದ ಬಳಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ಆರೋಪಿಸಿದ್ದಾರೆ.
Key words: FIR, against, actor, Dhruva Sarja , Mumbai