Saturday, August 1, 2026

BDA Apartments

Home Cinema ನಟ ದರ್ಶನ್ ಫ್ಯಾನ್ಸ್ ಬ್ಯಾಡ್ ಕಮೆಂಟ್ ವಿಚಾರ: ನಟಿ ರಮ್ಯಾ ಬೆನ್ನಿಗೆ ನಿಂತ ಶಿವಣ್ಣ

ನಟ ದರ್ಶನ್ ಫ್ಯಾನ್ಸ್ ಬ್ಯಾಡ್ ಕಮೆಂಟ್ ವಿಚಾರ: ನಟಿ ರಮ್ಯಾ ಬೆನ್ನಿಗೆ ನಿಂತ ಶಿವಣ್ಣ

ಬೆಂಗಳೂರು,ಜುಲೈ,29,2025 (www.justkannada.in):  ರೇಣುಕಸ್ವಾಮಿಗೆ ನ್ಯಾಯ ಸಿಗಲಿ ಎಂದಿದ್ದಕ್ಕೆ ನಟ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪರ ಹಲವು ನಟರು ನಿಂತಿದ್ದಾರೆ.

ಇದೀಗ ನಟ ಶಿವರಾಜ್ ಕುಮಾರ್ ಸಹ ನಟಿ ರಮ್ಯಾ ಬೆನ್ನಿಗೆ ನಿಂತಿದ್ದು ಈ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ನಟ ರಮ್ಯಾ ನಿಲುವು ಸರಿಯಾಗಿದೆ.  ರಮ್ಯಾ ಜತೆ ನಾವು ಸದಾ ನಿಲ್ಲುತ್ತೇವೆ. ನಟಿ ರಮ್ಯಾ ವಿರುದ್ದ ಬಳಸಿದ ಪದ ಖಂಡನೀಯ. ಯಾವ ಮಹಿಳೆ ವಿರುದ್ದವೂ  ಮಾತನಾಡಿವುದು ಸರಿಯಲ್ಲ.  ಈ ರೀತಿಯ ಹೇಳಿಕೆ ನೀಡಬಾರದು ತಾಯಿ ಅಕ್ಕ ಮಗಳಾಗಿ  ಗೌರವಿಸಬೇಕು. ಸೋಶಿಯಲ್ ಮಿಡಿಯಾವನ್ನ ಏಳಿಗೆಗಾಗಿ ಬಳಸಿ ಎಂದು ಸಲಹೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ನಿನ್ನೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.vtu

Key words: Actor, Darshan, fans, actress, Ramya, Shivaraj kumar