ಮೈಸೂರು,ಜುಲೈ,24,2025 (www.justkannada.in): ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ಗಳು ನಿರ್ಮಾಣವಾಗಿರುವುದಕ್ಕೂ ನನಗೂ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ರೆಸಾರ್ಟ್ ನಿರ್ಮಾಣ ಮಾಡಬೇಕು ಅಂದರೆ ಅಧಿಕಾರಿಗಳ ಗಮನಕ್ಕೆ ಬರಬೇಕು. ರೆಸಾರ್ಟ್ ನಿರ್ಮಾಣಕ್ಕೆ ಸಾಕಷ್ಟು ನಿಯಮಗಳು ಇವೆ. ಹಲವು ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು. ಅವುಗಳನ್ನೆಲ್ಲಾ ಬಿಟ್ಟು ಅಕ್ರಮವಾಗಿ ಒಂದು ವೇಳೆ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದರೆ ನಾನು ಕ್ರಮ ಕೈಗೊಳ್ಳುತ್ತೇನೆ. ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ ಅಂದರೆ ಕಾನೂನು ಇದೆ ಕೇಸ್ ದಾಖಲು ಮಾಡಿ ಎಂದು ತಿಳಿಸಿದರು.
ಅಕ್ರಮ ರೆಸಾರ್ಟ್ ಗಳ ನಿರ್ಮಾಣದಲ್ಲಿ ನನ್ನ ಪಾತ್ರವಿಲ್ಲ. ನಾನು ಭಾಗಿ ಆಗಿದ್ದೇನೆ ಅಂದರೆ ಕೇಸ್ ಹಾಕಿ ನ್ಯಾಯಾಂಗ ತನಿಖೆ ಮಾಡಲಿ. ಅಕ್ರಮ ರೆಸಾರ್ಟ್ ಗಳ ನಿರ್ಮಾಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಅಕ್ರಮವಾಗಿದ್ದರೆ ಜಿಲ್ಲಾಧಿಕಾರಿಗಳು ,ಅರಣ್ಯಾಧಿಕಾರಿಗಳು ಇದ್ದಾರೆ ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಯಾವ ರೆಸಾರ್ಟ್ ಆಕ್ರಮವಾಗಿದೆ ಎಂದು ಹೇಳಿ ನಾನು ಕ್ರಮ ತೆಗೆದುಕೊಳ್ಳುತ್ತೇನೆ. ಅಕ್ರಮವಾಗಿ ರೆಸಾರ್ಟ್ ತಲೆ ಎತ್ತಿದ್ದರೆ ಕಾನೂನಾತ್ಮಕವಾಗಿ ಡೆಮಾಲಿಶ್ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದು ಅನಿಲ್ ಚಿಕ್ಕಮಾದು ತಿಳಿಸಿದರು.
Key words: Kabini, illegal resorts, MLA, Anil Chikkamadu