ಡಬಲ್ ಮರ್ಡರ್: ತಮ್ಮನಿಂದಲೇ ಅಣ್ಣ ಮತ್ತು ತಂದೆಯ ಹತ್ಯೆ

ಹಾಸನ ,ಜುಲೈ,10,2025 (www.justkannada.in):  ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ತನ್ನ ತಂದೆ ಮತ್ತು ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆ ಹೊಳೇನರಸಿಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.

ದೇವೇಗೌಡ (70), ಮಂಜುನಾಥ್ (50) ಕೊಲೆಗೀಡಾದವರು. ಮೋಹನ್ (47) ತಂದೆ ಮತ್ತು ಒಡಹುಟ್ಟಿದ ಅಣ್ಣನನ್ನೇ ಕೊಂದ ವ್ಯಕ್ತಿ. ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಈ ಘಟನೆ ನಡೆದಿದ್ದು, ಆಸ್ತಿ ವಿವಾದ ಕೊಲೆಗೆ ಕಾರಣ ಎನ್ನಲಾಗಿದೆ.

ಅವಿವಾಹಿತರಾಗಿದ್ದ  ಇಬ್ಬರೂ ಪುತ್ರರು ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಇದ್ದರು. ಮಂಜುನಾಥ ತಂದೆ ಮತ್ತು ತಾಯಿಯೊಂದಿಗೆ ಇದ್ದ. ಮೋಹನ ಪ್ರತ್ಯೇಕವಾಗಿ ಒಬ್ಬನೆ ವಾಸಿಸುತ್ತಿದ್ದ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.vtu

Key words: Double Murder,  Brother, Father, Hassan