Saturday, September 12, 2026

BDA Apartments

ಕೋರ್ಟ್ ಗೆ ನಟ ದರ್ಶನ್ ಹಾಜರು: ವಿಚಾರಣೆ ಮುಂದೂಡಿಕೆ BDA JK_Adv BDA Adv
Home Cinema ಕೋರ್ಟ್ ಗೆ ನಟ ದರ್ಶನ್ ಹಾಜರು: ವಿಚಾರಣೆ ಮುಂದೂಡಿಕೆ

ಕೋರ್ಟ್ ಗೆ ನಟ ದರ್ಶನ್ ಹಾಜರು: ವಿಚಾರಣೆ ಮುಂದೂಡಿಕೆ

ಬೆಂಗಳೂರು,ಜುಲೈ,10,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್  ಇಂದು 57ನೇ ಸಿಸಿಎಚ್ ನ್ಯಾಯಾಲಯಕ್ಕೆ  ಹಾಜರಾಗಿದ್ದು, ವಿಚಾರಣೆಯನ್ನ ಕೋರ್ಟ್ ಆಗಸ್ಟ್ 12ಕ್ಕೆ ಮುಂದೂಡಿಕೆ ಮಾಡಿದೆ.

ಇಂದು ಕೋರ್ಟ್ ಗೆ  ನಟ ದರ್ಶನ್ ಹಾಜರಾಗಿದ್ದರು. ಆದರೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು. ಆರೋಪಿಗಳಾದ ಪವಿತ್ರಾ ಗೌಡ, ವಿನಯ್, ಧನರಾಜ್, ಕಾರ್ತಿಕ್ ಕೋರ್ಟ್ ಗೆ ಗೈರಾಗಿದ್ದರು.

ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು  57ನೇ ಸಿಸಿಎಚ್ ನ್ಯಾಯಾಲಯ  ಆಗಸ್ಟ್ 12ಕ್ಕೆ ಮುಂದೂಡಿದ್ದು ಅಂದು ಕೋರ್ಟ್ ಗೆ ಎಲ್ಲಾ ಆರೋಪಿಗಳು ಹಾಜರಾಗಬೇಕು ಎಂದು ಸೂಚಿಸಿದೆ.vtu

Key words: Renukaswamy, murder, case, Actor, Darshan, court