Saturday, August 15, 2026

BDA Apartments

Home Front Page ಸಿಎಂ ಅನುದಾನ ನೀಡದ ಆರೋಪ ತಳ್ಳಿ ಹಾಕಿದ ಬಿಜೆಪಿ ಉಚ್ಚಾಟಿತ ಶಾಸಕ

ಸಿಎಂ ಅನುದಾನ ನೀಡದ ಆರೋಪ ತಳ್ಳಿ ಹಾಕಿದ ಬಿಜೆಪಿ ಉಚ್ಚಾಟಿತ ಶಾಸಕ

ಬೆಂಗಳೂರು,ಜೂನ್,26,2025 (www.justkannada.in):  ಸಿಎಂ ಅನುದಾನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ ಸೋಮಶೇಖರ್, ಇದೆಲ್ಲಾ ನೂರಕ್ಕೆ ನೂರು ಬೋಗಸ್ ಎಂದಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್, ಶಾಸಕರು ಹೇಳಿದ ಕೆಲಸಗಳಿಗೆ ಮಂತ್ರಿಗಳು ಸ್ಪಂದಿಸುತ್ತಿದ್ದಾರೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ 35 ಕೋಟಿ ರೂ ಅನುದಾನ ಕೊಟ್ಟಿದ್ದಾರೆ ಎನ್ನುವ ಮೂಲಕ ಅನುದಾನ ನೀಡುತ್ತಿಲ್ಲ ಎಂಬ ಆರೋಪ ತಳ್ಳಿ ಹಾಕಿದರು.

ಸಚಿವ ಜಮೀರ್ ಅಹ್ಮದ್ ಖಾನ್ ನಮ್ಮ ಕ್ಷೇತ್ರಕ್ಕೆ14 ಸಾವಿರ ಮನೆ ಕೊಟ್ಟಿದ್ದಾರೆ. ಒಬ್ಬರೇ ಒಬ್ಬರು ಸಚಿವರ ವಿರುದ್ದ  ಏನು ಹೇಳಲ್ಲ ಜಮೀರ್ ಜನರಿಗೆ ಅನುಕೂಲ ಆಗುವ ಕೆಲಸ ಮಾಡಿದ್ದಾರೆ ಬಿಆರ್ ಪಾಟೀಲ್ ಯಾಕೆ ಈ ರೀತಿ ಹೇಳಿದ್ರೂ ಗೊತ್ತಿಲ್ಲ ಎಂದು ಎಸ್.ಟಿ ಸೋಮಶೇಖರ್ ಹೇಳಿದರು.vtu

Key words: BJP ,MLA ,ST Somashekar,  allegations, CM not, grant