Tuesday, September 22, 2026

BDA Apartments

ನೆರೆಗೆ ಸಿಲುಕಿರುವ 1ಸಾವಿರ ಹಳ್ಳಿಗಳನ್ನ ಸ್ಥಳಾಂತರಿಸಿ- ವಿಪಕ್ಷ ನಾಯಕ ಸಿದ್ಧ...
Home Front Page ನೆರೆಗೆ ಸಿಲುಕಿರುವ 1ಸಾವಿರ ಹಳ್ಳಿಗಳನ್ನ ಸ್ಥಳಾಂತರಿಸಿ- ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ..

ನೆರೆಗೆ ಸಿಲುಕಿರುವ 1ಸಾವಿರ ಹಳ್ಳಿಗಳನ್ನ ಸ್ಥಳಾಂತರಿಸಿ- ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ..

ಬೆಂಗಳೂರು,ಅ,11,2019(www.justkannada.in):  ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಸುಮಾರು 1 ಸಾವಿರ ಹಳ್ಳಿಗಳು ಮುಳುಗಿವೆ. ಈ ಹಳ್ಳಿಗಳನ್ನ ಬೇರೆಡೆಗೆ ಸ್ಥಳಾಂತರಿಸಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ನೆರೆಹಾವಳಿ ಬಗ್ಗೆ ಚರ್ಚೆ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯದಲ್ಲಿ ಉಂಟಾದ ಪ್ರವಾಹ ಎಂದು ಈ ರೀತಿ ಸಂಭವಿಸಿರಲಿಲ್ಲ.  ನೆರೆ ಹಾವಳಿಯಿಂದ ಒಂದು ಸಾವಿರ  ಹಳ್ಳಿ ಮುಳುಗಿವೆ.  ನೆರೆ ಬಂದರೇ ನದಿ ದಂಡೆಯಲ್ಲಿರುವ ಹಳ್ಳಿಗಳು ಪದೇ ಪದೇ ಮುಳುಗುತ್ತವೆ. ಹೀಗಾಗಿ ಹಳ್ಳಿಗಳನ್ನ ಬೇರೆಡೆಗೆ ಶಿಫ್ಟ್ ಮಾಡಿ ಎಂದು ಒತ್ತಾಯಿಸಿದರು.

ಹಾಗೆಯೇ ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಜನರೇ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಳಿಸುತ್ತಾರೆ ಎಂದರು.

Key words: Opposition leader –Siddaramaiah- urges- evacuation – 1 thousand villages