Thursday, August 13, 2026

BDA Apartments

Home Front Page ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ 2ನೇ ದಿನವೂ ಮುಂದುವರೆದ...

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ನಿವಾಸ, ಶಿಕ್ಷಣ ಸಂಸ್ಥೆಗಳ ಮೇಲೆ 2ನೇ ದಿನವೂ ಮುಂದುವರೆದ ಐಟಿ ದಾಳಿ…

ಬೆಂಗಳೂರು,ಅ,11,2019(www.justkannada.in): ಮಾಜಿ ಡಿಸಿಎಂ. ಡಾ.ಜಿ. ಪರಮೇಶ್ವರ್ ನಿವಾಸ ಹಾಗೂ ಸಿದ್ಧಾರ್ಥ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎರಡನೇ ದಿನವೂ ಮುಂದುವರೆದಿದೆ.

ನಿನ್ನೆ ಬೆಳಿಗ್ಗೆಯೇ ತುಮಕೂರಿನಲ್ಲಿರುವ ಡಾ.ಜಿ ಪರಮೇಶ್ವರ್  ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇಂದು ಸಹ ದಾಳಿ ಮುಂದುವರೆದಿದೆ.  ತೆರಿಗೆ ವಂಚನೆ, ಸಿದ್ದಾರ್ಥ ವೈದ್ಯ ಕಾಲೇಜಿನಲ್ಲಿ ನಿಯಮಬಾಹಿರ ಸೀಟು ಹಂಚಿಕೆ ಅಥವಾ ಮಾರಾಟ ಆರೋಪ ಸಂಬಂಧ  ದಾಳಿ ನಡೆದಿದೆ ಎನ್ನಲಾಗಿದೆ.

ಪರಮೇಶ್ವರ್ ಆದಾಯದ ಬಗ್ಗೆ ವಿಚಾರಣೆ ತೀವ್ರಗೊಂಡಿದೆ. ಸಿದ್ಧಾರ್ಥ ಕಾಲೇಜಿನ  ಪ್ರಾಂಶುಪಾಲರಾದ ಶಿವ ಪ್ರಕಾಶ್ ಅವರನ್ನ ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು ದಾಖಲೆಗಳ ಬಗ್ಗೆ ವಿವರಣೆ ಪಡೆಯುತ್ತಿದ್ದಾರೆ. ಹಾಗಯೇ  ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರ್, ಸಹೋದರನ ಪುತ್ರ ಆನಂದ್ ಗೆ ಸೇರಿದ ಅಕೌಂಟ್ ಗಳನ್ನ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Former DCM-g.parameshwar- residence -Continued- IT raid – 2nd day