Wednesday, August 12, 2026

BDA Apartments

Home Front Page ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಯ್ಲಿಗೆ ಶತಕ ಸಂಭ್ರಮ

ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಯ್ಲಿಗೆ ಶತಕ ಸಂಭ್ರಮ

ಪುಣೆ, ಅಕ್ಟೋಬರ್ 11, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೆ ದಿನ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ 26ನೇ ಶತಕ ಸಿಡಿಸಿದ್ದಾರೆ.

ಮೊದಲ ದಿನ ಔಟಾಗದೆ 63 ರನ್‌ನಿಂದ 2ನೇ ದಿನದಾಟವನ್ನು ಮುಂದುವರಿಸಿದ ಕೊಹ್ಲಿ 173 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು.

ಫಿಲ್ಯಾಂಡರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕೊಹ್ಲಿ 81ನೇ ಪಂದ್ಯದಲ್ಲಿ ಮೂರಂಕೆಯನ್ನು ದಾಖಲಿಸಿದರು. ಈ ವರ್ಷ ಕೊಹ್ಲಿ ಗಳಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ.

ನಾಯಕನಾಗಿ 50ನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಅವರು ಅಜಿಂಕ್ಯ ರಹಾನೆ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 150 ರನ್ ಸೇರಿಸಿದ್ದಾರೆ. ಭಾರತ 111 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 348 ರನ್ ಗಳಿಸಿದೆ.