Thursday, September 17, 2026

BDA Apartments

ಬೆಂಗಳೂರು ವಿಮಾನ ನಿಲ್ದಾಣದಲ್ಲಿ RCB ಮಾರ್ಕೆಟಿಂಗ್ ಮುಖ್ಯಸ್ಥ ಬಂಧನ BDA JK_Adv BDA Adv
Home Crime ಬೆಂಗಳೂರು ವಿಮಾನ ನಿಲ್ದಾಣದಲ್ಲಿ RCB ಮಾರ್ಕೆಟಿಂಗ್ ಮುಖ್ಯಸ್ಥ ಬಂಧನ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ RCB ಮಾರ್ಕೆಟಿಂಗ್ ಮುಖ್ಯಸ್ಥ ಬಂಧನ.

RCB Marketing Head Nikhil Sosale arrested at Bengaluru airport, allegedly while trying to flee the city. Sosale announced a Victory Parade from Vidhana Soudha to Chinnaswamy without police permission. Despite police denial, the post was not taken down, misleading thousands of fans

vtu

ಬೆಂಗಳೂರು, ಜೂ.೦೬,೨೦೨೫: ನಗರದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಬಂಧನ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ನಿಖಿಲ್‌ ಸೆರೆ.

ಪೊಲೀಸರ ಅನುಮತಿಯಿಲ್ಲದೆ ವಿಧಾನಸೌಧದಿಂದ ಚಿನ್ನಸ್ವಾಮಿಗೆ ಆರ್ಸಿಬಿ ತಂಡದ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಸೋಷಿಯಲ್‌ ಮೀಡಿಯಾ ಮೂಲಕ ನಿಖಿಲ್‌ ಸೋಸಲೆ ಘೋಷಿಸಿದ್ದ ಎಂಬುದು ಆರೋಪ.

ವಿಜಯೋತ್ವಸ ಮೆರವಣಿಗೆಗೆ ಪೊಲೀಸರ ನಿರಾಕರಣೆಯ ಹೊರತಾಗಿಯೂ, ಆರೋಪಿ ನಿಖಿಲ್‌ ಸೋಷಿಯಲ್‌ ಮೀಡಿಯಾದಲ್ಲಿದ್ದ ಪೋಸ್ಟ್ ಅನ್ನು ತೆಗೆದುಹಾಕಲಿಲ್ಲ, ಇದರಿಂದ ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳನ್ನು ದಾರಿ ತಪ್ಪಿಸಲಾಯಿತು ಎಂಬುದು ಆತನ ಮೇಲಿರುವ ಆರೋಪ.

ಮಧ್ಯಾಹ್ನ 1 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನ  ಗೇಟ್ಸ್ 9 ಮತ್ತು 10 ರ ಬಳಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗುವುದು ಎಂದು ಸಹ ಇದೇ ನಿಖಿಲ್‌ ಸೋಸಲೆ  ಹೇಳಿಕೊಂಡಿದ್ದ.  ಆದರೆ ಪಾಸ್‌ ವಿತರಣೆಯೆ ನಡೆಯಲಿಲ್ಲ. ಇದರಿಂದಾಗಿ ಜನಸಂದಣಿ ಹೆಚ್ಚಾಯಿತು.

words bangalore

ಈತನ ಮತ್ತೊಂದು ಪೋಸ್ಟ್‌ನಲ್ಲಿ ಕ್ರೀಡಾಂಗಣ ಪ್ರವೇಶ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತು. ಆರ್ಸಿಬಿ ತಂಡದ ಅಭಿಮಾನಿಗಳಲ್ಲಿ ಗೊಂದಲ ಹೆಚ್ಚಾಗಿದೆ ಸೋಸಲೆ ನಿರ್ದೇಶನದ ಮೇರೆಗೆ. ಜತೆಗೆ ಕಾರ್ಯಕ್ರಮ ಸಂಘಟನೆ ಜವಾಬ್ದಾರಿ ಹೊತ್ತಿದ್ದ “ ಡಿಎನ್‌ಎ ನೆಟ್‌ವರ್ಕ್‌” ಸೂಚನೆಯ ಮೇರೆಗೆ ಸ್ಟೇಡಿಯಂನ  22 ಗೇಟ್‌ಗಳಲ್ಲಿ ಕೇವಲ 3 (19, 20 ಮತ್ತು 22) ಗೇಟ್‌ ಗಳನ್ನು ಮಾತ್ರ ತೆರೆಯಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿ ನಿಖಿಲ್‌ ಸೊಸಲೆ ಈ  ಎಲ್ಲಾ ಪ್ರಕಟಣೆಗಳನ್ನು ಆರ್‌ಸಿಬಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮಾಡಲಾಗಿತ್ತು.  ಇದನ್ನು ಸೋಸಲೆ ಮತ್ತು  ತಂಡದ ಮೇಲ್ವಿಚಾರಣೆಯಲ್ಲಿ ಮಾಡಲಾಗಿತ್ತು. ಹಾಗಾಗಿ ಇದೀಗ ಘಟನೆಗೆ ಇವರು ದಾರಿ ತಪ್ಪಿಸಿದ ಟ್ವೀಟ್‌ ಗಳೇ ಮೂಲ ಎಂದು ಆರೋಪಿಸಲಾಗಿದೆ.

key words: RCB, Marketing Head, arrested, Bangalore, Airport.

vtu

SUMMARY:

rcb marketing rcb-nikhil-arrested rcb nikhil arrested

RCB Marketing Head Nikhil Sosale arrested at Bengaluru airport, allegedly while trying to flee the city. Sosale announced a Victory Parade from Vidhana Soudha to Chinnaswamy without police permission. Despite police denial, the post was not taken down, misleading thousands of fans