Thursday, September 17, 2026

BDA Apartments

ಕಾಲ್ತುಳಿತ ಪ್ರಕರಣ: ನಿಜವಾದ ಆರೋಪಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮ...
Home Front Page ಕಾಲ್ತುಳಿತ ಪ್ರಕರಣ: ನಿಜವಾದ ಆರೋಪಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ –ಬಿವೈ ವಿಜಯೇಂದ್ರ

ಕಾಲ್ತುಳಿತ ಪ್ರಕರಣ: ನಿಜವಾದ ಆರೋಪಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ –ಬಿವೈ ವಿಜಯೇಂದ್ರ

ಬೆಂಗಳೂರು,ಜೂನ್,6,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜವಾದ ಆರೋಪಿಗಳು ಅಂದರೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು.

ಇಂದು ಬಿಜೆಪಿ ಜೆಡಿಎಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ,  ಪ್ರಕರಣದಲ್ಲಿ ಅಧಿಕಾರಿಗಳನ್ನ ತಲೆದಂಡ ಮಾಡಲಾಗಿದೆ. ಇಂಟಲಿಜೆನ್ಸ್ ಅಧಿಕಾರಿಗಳನ್ನ ಯಾಕೆ ಅಮಾನತು ಮಾಡಿಲ್ಲ ಸರ್ಕಾರಕ್ಕೆ ಸಂಭ್ರಮಾಚರಣೆಯ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಎ1 ಆರೋಪಿಯಾಗಬೇಕು.  ಡಿಸಿಎಂ ಡಿಕೆ ಶಿವಕುಮಾರ್ ಎ2 ಗೃಹ ಸಚಿವ ಪರಮೇಶ್ವರ್  ಎ3 ಆಗಬೇಕು. ನಿಜವಾದ ಆರೋಪಿ ಸಿದ್ದರಾಮಯ್ಯ. ಸಂಭ್ರಮಾಚರಣೆ ಬಗ್ಗೆ ಸಿಎಂ ಟ್ವೀಟ್ ಮಾಡಿದ್ದರು.  ವಿಧಾನಸೌಧದ ಎದುರು ಸಂಭ್ರಮಾಚರಣೆ ಎಂದಿದ್ದರು  ಆದರೆ ಕೆಎಸ್ ಸಿಎ ಪತ್ರಕ್ಕೆ ಪೊಲೀಸರು ನಿರಾಕರಿಸಿದ್ದರು ಲಕ್ಷಾಂತರ ಜನ ಸೇರುತ್ತಾರೆಂದು  ನಿರಾಕರಣೆ ಮಾಡಿದ್ದರು ಎಂದು ಬಿವೈ ವಿಜಯೇಂದ್ರ ತಿಳಿಸಿದರು.vtu

Key words: Stampede case, BY Vijayendra, real, accused, CM Siddaramaiah