Friday, September 18, 2026

BDA Apartments

ಮುಡಾದ 94 ಮಂದಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್..! BDA JK_Adv BDA Adv
Home Front Page ಮುಡಾದ 94 ಮಂದಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್..!

ಮುಡಾದ 94 ಮಂದಿ ಹೊರ ಗುತ್ತಿಗೆ ನೌಕರರಿಗೆ ಗೇಟ್ ಪಾಸ್..!

ಮೈಸೂರು,ಮೇ,16,2025 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ(MUDA) ಕೆಲಸ ನಿರ್ವಹಿಸುತ್ತಿದ್ದ 94 ಮಂದಿ ಹೊರ ಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರ ಗೇಟ್ ಪಾಸ್ ನೀಡಿದೆ.

ಹೌದು ನಿಗದಿಗಿಂತ‌ ಹೆಚ್ಚಿನ ಪ್ರಮಾಣದಲ್ಲಿ ನೌಕರರನ್ನ ನೇಮಕ ಮಾಡಿ ಮುಡಾಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದ ಆರೋಪ ಕೇಳಿ ಬಂದ ಬೆನ್ನಲ್ಲೆ ಹೆಚ್ಚುವರಿಯಾಗಿ ನೇಮಕವಾಗಿದ್ದ 94 ಮಂದಿ ಹೊರ ಗುತ್ತಿಗೆ ನೌಕರರನ್ನ ಇದೀಗ ಕೆಲಸದಿಂದ ತೆಗೆದು ಹಾಕಲಾಗಿದೆ. ಡಿ ಗ್ರೂಪ್ ಹಾಗೂ ಕಂಪ್ಯೂಟರ್ ಆಪರೇಟರ್ ಗಳನ್ನ  ಕಿಕ್ ಔಟ್ ಮಾಡಲಾಗಿದೆ.

66 ಮಂದಿ ಕೆಲಸ ಮಾಡುವ ಸ್ಥಳದಲ್ಲಿ 150 ಮಂದಿ  ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈ ಮೂಲಕ 94 ಮಂದಿ ನೌಕರರು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದರು. ಮುಡಾ‌ ಹಗರಣ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ಹಲವರ‌ ಕೆಲಸಕ್ಕೆ ಕುತ್ತು ಬಂದಿದೆ.

ಸರ್ಕಾರದ‌ ನೀತಿ- ನಿಮಯ ಗಾಳಿಗೆ ತೂರಿ ಹೆಚ್ಚುವರಿ ನೌಕರರನ್ನ ನೇಮಕ ಮಾಡಿಕೊಂಡು  ಮುಡಾದ ಹಿರಿಯ ಅಧಿಕಾರಿಗಳು ಮುಡಾಗೆ ಆರ್ಥಿಕ ಹೊರೆ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.   ಮುಡಾ‌ ಹೋರಾಟಗಾರ, ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಂದ ಈ ಹಿಂದೆ ಈ ಬಗ್ಗೆ ದೂರು ಸಲ್ಲಿಕೆ ಮಾಡಿದ್ದರು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.

ಇದೀಗ ದೂರಿನ ಅನ್ವಯ ಸರ್ಕಾರ ಕ್ರಮಕ್ಕೆ‌ ಮುಂದಾಗಿದ್ದು,  94 ಮಂದಿ ಹೊರ ಗುತ್ತಿಗೆ ನೌಕರರನ್ನ ಕೆಲಸದಿಂದ ತೆಗೆದು ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Gate passes, 94 employees, MUDA